ಇಬ್ಬರಿಗೆ ಪಿಎಚ್ಡಿ ಪದವಿ ಪ್ರದಾನ
ಬೆಂಗಳೂರು, ಜ.24: ಬೆಂಗಳೂರು ವಿಶ್ವವಿದ್ಯಾನಿಲಯದ ಇತಿಹಾಸ ವಿಭಾಗದ ಸಂಶೋಧನಾ ವಿದ್ಯಾರ್ಥಿ ಸಿ.ಎಲ್ಲೇಶ್ ಅವರು ಮಂಡಿಸಿದ ಕೋಲಾರ ಜಿಲ್ಲೆಯ ಗಡಿಭಾಗದ ಸಮಸ್ಯೆಗಳು-ಒಂದು ಐತಿಹಾಸಿಕ ಅಧ್ಯಯನ ಎಂಬ ಮಹಾ ಪ್ರಬಂಧಕ್ಕೆ ಬೆಂಗಳೂರು ವಿವಿಯು ಪಿಎಚ್ಡಿ ಪದವಿಯನ್ನು ಪ್ರದಾನ ಮಾಡಿದ್ದು, ಇವರಿಗೆ ಬೆಂಗಳೂರು ವಿವಿಯ ಇತಿಹಾಸ ವಿಭಾಗದ ಪ್ರಾಧ್ಯಾಪಕ ಪ್ರೊ.ಎಂ.ಮುನಿರಾಜಪ್ಪ ಮಾರ್ಗದರ್ಶಕರಾಗಿದ್ದರು. ಬಿ.ರಜಿನೀಶ್ಕುಮಾರ್: ಬೆಂಗಳೂರಿನ ಬಿಎಂಎಸ್ ತಾಂತ್ರಿಕ ಕಾಲೇಜಿನ ಸಹ ಪ್ರಾಧ್ಯಾಪಕ ಬಿ.ರಜಿನೀಶ್ಕುಮಾರ್ ಮಂಡಿಸಿದ ‘‘ಡಿಸೈನ್ ಆ್ಯಂಡ್ ಇವಾಲ್ಯುಯೇಷನ್ ಆಫ್ ಸ್ಟಿಫ್ನೆನ್ಸ್ ಆ್ಯಂಡ್ ಡ್ಯಾಂಪಿಂಗ್ ಆನ್ ದಿ ಪರ್ಫಾರ್ಮನ್ಸ್ ಆಫ್ ಅಸ್ಕ್ವೀಜ್ ಫಿಲ್ಮ್ಡ್ಯಾಂಪರ್ ಲ್ಯೂಬ್ರಿಕೇಟೆಡ್ ವಿತ್ ಎಲೆಕ್ಟ್ರೋರಿಹೊಲಾಜಿಕಲ್ ಫ್ಲೂಯಿಡ್’’ ಎಂಬ ಮಹಾ ಪ್ರಬಂಧಕ್ಕೆ ಬೆಂಗಳೂರು ವಿಶ್ವವಿದ್ಯಾನಿಲಯವು ಪಿಎಚ್ಡಿ ಪದವಿಯನ್ನು ಪ್ರದಾನ ಮಾಡಿದ್ದು, ಇವರಿಗೆ ಬೆಂಗಳೂರು ವಿವಿಯ ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜಿನ ಯಾಂತ್ರಿಕ ವಿಭಾಗದ ಪ್ರಾಧ್ಯಾಪಕ ಪ್ರೊ.ಎಸ್.ರಂಗನಾಥ್ ಅವರು ಮಾರ್ಗದರ್ಶಕರಾಗಿದ್ದರು