ಕಸದಿಂದ ಅರಳಿದ ಹೂವುಗಳು
ಕ್ರೀಡೆ ಪ್ರತಿಯೊಂದು ಶಾಲೆಗೂ ಅವಿಭಾಜ್ಯ ಅಂಗವಾಗಿದೆ. ದುರದೃಷ್ಟವಶಾತ್ ಬಹಳಷ್ಟು ಶಾಲೆಗಳು ಅದಕ್ಕೆ ಸೂಕ್ತ ಮೂಲಸೌಕರ್ಯಗಳ ಕೊರತೆ ಹೊಂದಿವೆ. ಈ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿಗಳು ಸಂಕಷ್ಟ ಅನುಭವಿಸುತ್ತಾರೆ. ಸೌಲಭ್ಯ ಇಲ್ಲ ಎಂದು ಕೊರಗುವ ಬದಲಿಗೆ ನಾಗರಬಾವಿ ಬಳಿಯ ಗಿಡದಕೋನೇನಹಳ್ಳಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಶುಕ್ರವಾರದಂದು ವಿಶಿಷ್ಟ ಉದಾಹರಣೆ ನಿರ್ಮಿಸಿದರು. ವಿದ್ಯಾರ್ಥಿಗಳು ಅವರ ಶಾಲೆಯ ಆವರಣದ ಪಕ್ಕದಲ್ಲಿ ಎಸೆಯಲಾದ ತ್ಯಾಜ್ಯಗಲಿಂದ ಅವರು ತಯಾರಿಸಿದ ಕರಕುಶಲ ಕಲೆಯನ್ನು ಪ್ರದರ್ಶಿಸಿದರು. ಶಾಲೆಯ ಸುತ್ತಮುತ್ತಲಿನ ನಾಗರಿಕರು ಈ ಕರಕುಶಲ ಉತ್ಪನ್ನಗಳನ್ನು ಕೊಂಡು ಅದರ ಬದಲಿಗೆ ಕ್ರೀಡೆ ಮತ್ತು ತೋಟಗಾರಿಕೆ ಸಾಧನಗಳನ್ನು ವಿದ್ಯಾರ್ಥಿಗಳಿಗೆ ನೀಡಿದರು. ಈ ಸಾಧನಗಳನ್ನು ಬಳಸಿ ವಿದ್ಯಾರ್ಥಿಗಳು ಬೇವು ಮತ್ತಿತರ ಉಪಯುಕ್ತ ಗಿಡಗಳನ್ನು ನೆಟ್ಟರು. ಹೀಗೆ ಮಾಡುವ ಮೂಲಕ ಶಾಲೆಯ ವಿದ್ಯಾರ್ಥಿಗಳು ಇಡೀ ರಾಜ್ಯಕ್ಕೆ ಮಾದರಿಯಾಗಿದ್ದಾರೆ.
ಶುಕ್ರವಾರ ಪೇಪರ್ ಬ್ಯಾಗ್ಗಳು ಮತ್ತು ಹೂವಿನ ಹಾರಗಳು, (ಎಸೆದ ಪ್ಲಾಸ್ಟಿಕ್ ಮತ್ತು ಪೇಪರ್ಗಳಿಂದ ತಯಾರಿಸಿದ್ದು), ಬಾಗಿಲಿನ ಆಲಂಕಾರಿಕ ವಸ್ತುಗಳು, ಆಟಿಕೆಗಳು, ಬೊಂಬೆಗಳು, ರಬ್ಬರ್ ಮ್ಯಾಟ್, ಸ್ಟಿಕ್ ಮತ್ತು ಪಕ್ಷಿಗೂಡುಗಳು, ಬಟ್ಟಲು, ಉಡುಗೊರೆ ಬಾಕ್ಸ್, ಚಮಚೆಯ ಕಲೆ ಮತ್ತು ಫೋಟೊ ಪ್ರೇಮ್ ಪ್ರದರ್ಶಿಸಿದ್ದರು. ಆರನೆಯ ತರಗತಿಯ ವಿದ್ಯಾರ್ಥಿ ಎಸ್.ಮಧು, ‘ಆಟ ಎನ್ನುವುದು ನಮಗೆ ವಿಶ್ವಾಸ ತುಂಬುವುದಲ್ಲದೆ ರಿಲ್ಯಾಕ್ಸ್ ಆಗುವ ಮಾರ್ಗವಾಗಿದೆ. ಇದು ವಿದ್ಯಾರ್ಥಿಗಳಿಗೆ ಅವರ ಸಮಯವನ್ನು ಉತ್ತಮ ರೀತಿಯಲ್ಲಿ ಸಮತೋಲನ ಮಾಡಿಕೊಳ್ಳುವುದನ್ನು ಕಲಿಸುತ್ತದೆ. ಆದರೆ ನಮಗೆ ಸ್ಪೋರ್ಟ್ಸ್ ಕಿಟ್ ಕೊಳ್ಳುವ ಶಕ್ತಿಯಿಲ್ಲ. ಆದ್ದರಿಂದ ಶಾಲೆಯ ಶಿಕ್ಷಕರು, ಶಿಕ್ಷಣ ಇಲಾಖೆಯ ಅಧಿಕಾರಿಗಳು ಮತ್ತು ಪೊಲೀಸ್ ಕಾಲನಿಯ ಸರಕಾರಿ ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿಗಳು ಈ ಕರಕುಶಲ ಉತ್ಪನ್ನಗಳ ಪ್ರದರ್ಶನ ಏರ್ಪಡಿಸಲು ನಿರ್ಧರಿಸಿದರು.
ಏಳನೆಯ ತರಗತಿಯ ವಿದ್ಯಾರ್ಥಿನಿ ಬಿ.ಸುಧಾ, ‘ನಮ್ಮ ಪೋಷಕರ ಆರ್ಥಿಕ ಸ್ಥಿತಿಯ ಹಿನ್ನೆಲೆ ಮತ್ತು ಶಿಕ್ಷನ ಇಲಾಖೆಯ ಮೇಲೆ ಒತ್ತಡ ಹೇರದೆ ನಮ್ಮ ಅಗತ್ಯ ಉದ್ದೇಶಗಳನ್ನು ಈಡೇರಿಸಿಕೊಳ್ಳಲು ಈ ಕಾರ್ಯಗಾರ ಅತ್ಯುತ್ತಮ ವೇದಿಕೆಯಾಗಿದೆಯಾಗಿದೆ. ಆದ್ದರಿಂದ ನಾವೇ ಕಲಿತು ಈ ವಸ್ತು ಪ್ರದರ್ಶನ ಆಯೋಜಿಸಲು ನಿರ್ಧರಿಸಿದೆವು. ಈಗ ಈ ಪ್ರದರ್ಶನಕ್ಕೆ ಕಚ್ಚಾ ವಸ್ತುಗಳನ್ನು ಸಂಗ್ರಹಿಸುವುದು ಎಲ್ಲಿ ಸಂಗ್ರಹಿಸುವುದು ಎಂಬ ಸಮಸ್ಯೆ ಎದುರಾಯಿತು. ದುಬಾರಿ ಹೂಡಿಕೆಯ ಬದಲಿಗೆ ನಾವು ನಮ್ಮ ಶಾಲೆಯ ಬಳಿ ದೊರೆಯುವ ತ್ಯಾಜ್ಯದಿಂದಲೇ ಉತ್ಪನ್ನ ಸಿದ್ಧಪಡಿಸಲು ನಿರ್ಧರಿಸಿದೆವು. ಈಗ ಜಿಎಚ್ಎಸ್ಪಿಸಿ ಸದಸ್ಯರು ನಮಗೆ ‘ಆರ್ಟ್ ಆಫ್ ಗಿವಿಂಗ್’ ಎಂಬ ಪರಿಕಲ್ಪನೆಯನ್ನು ಪರಿಚಯಿಸಿದ್ದು ತ್ಯಾಜ್ಯವನ್ನು ಕಲಾಕೃತಿಗಳನ್ನಾಗಿ ಕೆಲವೇ ನಿಮಿಷಗಳಲ್ಲಿ ಸಿದ್ಧಪಡಿಸುವುದನ್ನು ಕಲಿತೆವು’ ಎಂದರು. ಸ್ಥಳೀಯ ನಿವಾಸಿಗಳಾದ ಮಾರೇಗೌಡ ಮತ್ತು ಕೆಂಪಮ್ಮ, ‘ಮಕ್ಕಳು ಸಿದ್ಧಪಡಿಸಿದ ಉತ್ಪನ್ನಗಳು ನಮಗೆ ಬಹಳ ಆಕರ್ಷಕವೆನಿಸಿದವು. ಇವುಗಳನ್ನು ನಾನು ಕೊಳ್ಳದೇ ಇರಲು ಸಾಧ್ಯವೇ ಆಗಲಿಲ್ಲ. ಶಾಲೆಯ ಬಳಿ ಈ ವಿದ್ಯಾರ್ಥಿಗಳು ಆಡುವಾಗ ಈ ಮಕ್ಕಳಲ್ಲಿ ಇಂತಹ ಪ್ರತಿಭೆಇರಬಹುದು ಎಂದು ನಮಗೆ ಗೊತ್ತಿರಲಿಲ್ಲ. ಆದ್ದರಿಂದ ಅವರ ಕಲಾಕೃತಿ ಕೊಂಡು ಟೆನ್ನಿಕಾಯ್ಟಿರಿಂಗ್ ನೀಡಿದೆವು’ ಎಂದರು. ವಿದ್ಯಾರ್ಥಿಗಳ ಕಾರ್ಯದಿಂದ ಸಂತೋಷಗೊಂಡ ಬ್ಲಾಕ್ ಎಜುಕೇಷನ್ ಆಫೀಸರ್ ಗೋಪಾಲಕೃಷ್ಣ, ‘ತೋಟಗಾರಿಕೆಯಿಂದ ವಿದ್ಯಾರ್ಥಿಗಳು ತಂಡದಲ್ಲಿ ಕೆಲಸ ಮಾಡುವ ಹಾಗೂ ಜವಾಬ್ದಾರಿಯುತವಾಗಿ ಕೆಲಸ ಮಾಡುವುದನ್ನು ಕಲಿಯುತ್ತಾರೆ. ಪೋಷಕರು, ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಸಮುದಾಯದ ಭಾವನೆ ಹೊಂದುತ್ತಾರೆ ಎಂದರು.