ಆರ್ಟ್ ಆಫ್ ಲಿವಿಂಗ್ ಮಹಾಮೇಳ: ಅನುಮತಿ ಓಕೆ; ಸೇನೆ ಯಾಕೆ?
ಖಾಸಗಿ ಸಂಸ್ಥೆಯೊಂದು ಆಯೋಜಿಸುವ ಕಾರ್ಯಕ್ರಮಕ್ಕೆ ಯಮುನಾ ನದಿಗೆ ಅಡ್ಡಲಾಗಿ ತೇಲುಸೇತುವೆ ನಿರ್ಮಿಸಲು ಸೇನೆಯನ್ನು ನಿಯೋಜಿಸಬೇಕು ಎಂಬ ಯೋಚನೆ ಸರಕಾರಕ್ಕೆ ಏಕೆ ಬಂತು?
ಕೇಂದ್ರ ಸರಕಾರದಲ್ಲಿರುವ ಯಾರಿಂದಲೂ ಈ ಪ್ರಶ್ನೆಗೆ ಸಮಾಧಾನಕರ ಉತ್ತರ ಸಿಕ್ಕಿಲ್ಲ.
ರವಿಶಂಕರ ಗುರೂಜಿಯವರ ಆರ್ಟ್ ಆಫ್ ಲಿವಿಂಗ್ ಪ್ರತಿಷ್ಠಾನದ 35ನೆ ವಾರ್ಷಿಕೋತ್ಸವ ಅಂಗವಾಗಿ ಹಮ್ಮಿಕೊಂಡಿರುವ ಮಹತ್ವಾಕಾಂಕ್ಷೆಯ ವಿಶ್ವ ಸಾಂಸ್ಕೃತಿಕ ಹಬ್ಬ, ಈಗಾಗಲೇ ಪರಿಸರ ನಿಯಮಾವಳಿಯನ್ನು ಗಾಳಿಗೆ ತೂರಿದ್ದಕ್ಕಾಗಿ ತೊಂದರೆಗೆ ಸಿಕ್ಕಿಹಾಕಿಕೊಂಡಿದೆ. ಈ ವಿವಾದ ಸರಣಿಗೆ ಇತ್ತೀಚಿನ ಸೇರ್ಪಡೆ ಎಂದರೆ, ಮುಂದಿನ ರವಿವಾರ ನಡೆಯುವ ಈ ಉತ್ಸವದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಳ್ಳಬೇಕಿದ್ದ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರು ಅನಿವಾರ್ಯ ಕಾರಣಗಳಿಂದ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಸಂದೇಶ ರವಾನಿಸಿರುವುದು.
ಭರ್ಜರಿ ಸಿದ್ಧತೆಮೂರು ದಿನಗಳ ಮಹಾಮೇಳವನ್ನು ಬೃಹತ್ ಪ್ರಮಾಣದಲ್ಲಿ ಆಯೋಜಿಸಲಾಗಿದೆ. ಯಮುನಾ ನದಿ ದಂಡೆಯ 1,000 ಎಕರೆ ವಿಶಾಲ ಪ್ರದೇಶದಲ್ಲಿ ಇದಕ್ಕೆ ಸಿದ್ಧತೆ ನಡೆಯುತ್ತಿದೆ. ಸಾವಿರಾರು ಕಲಾವಿದರಿಗೆ ಏಕಕಾಲಕ್ಕೆ ವೇದಿಕೆ ಒದಗಿಸುವ ದೃಷ್ಟಿಯಿಂದ 40 ಅಡಿ ಎತ್ತರದ ಬಹುಮಹಡಿ ವೇದಿಕೆ ಸಿದ್ಧವಾಗುತ್ತಿದೆ. ದೈತ್ಯ ಗಾತ್ರದ ವರ್ಗಾಯಿಸಬಹುದಾದ ಬಿಳಿ ಕ್ಯಾಬಿನ್ಗಳು ಹಾಗೂ ಸಂಚಾರಿ ಗುಡಿಸಲುಗಳು ಕೂಡಾ ತಲೆ ಎತ್ತಿವೆ. ತಾತ್ಕಾಲಿಕ ವಾಹನ ನಿಲುಗಡೆ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ.
ಮೇಳದ ಸ್ಥಳಕ್ಕೆ ಆಗಮಿಸುವ ಹಾಗೂ ಇಲ್ಲಿಂದ ತೆರಳುವ ಅಂದಾಜು 35 ಲಕ್ಷ ಮಂದಿಯ ಸಲುವಾಗಿ ಐದು ತೇಲು ಸೇತುವೆಗಳನ್ನು ಯಮುನಾ ನದಿಗೆ ಅಡ್ಡದಾಗಿ ನಿರ್ಮಿಸಲಾಗುತ್ತಿದೆ.
ಯಮುನಾ ನದಿಗೆ ಹರಿಯುವ ಚರಂಡಿಗಳನ್ನು ಸ್ವಚ್ಛಗೊಳಿಸುವ ಸಲುವಾಗಿ ಸಂಘಟಕರು ಕಿಣ್ವಗಳನ್ನು ಕೂಡಾ ಚರಂಡಿಗಳಿಗೆ ಸೇರಿಸಿದ್ದಾರೆ ಎನ್ನಲಾಗಿದೆ. ಇದರಿಂದ ಯಮುನಾ ನದಿಯ ಸೂಕ್ಷ್ಮ ಪರಿಸರಕ್ಕೆ ಅಪಾಯ ಎದುರಾಗಿದೆ. ತಜ್ಞರು ಹೇಳುವಂತೆ, ಈ ಮಹಾಮೇಳದಿಂದಾಗಿ ನದಿ ದಂಡೆಯ ಮೇಲೆ ಕಾಯಂ ವ್ಯತಿರಿಕ್ತ ಪರಿಣಾಮವಾಗಲಿದೆ.ಮಹಾಮೇಳದ ಬಗ್ಗೆ ಪರಿಸರವಾದಿಗಳು ಪ್ರಶ್ನೆಗಳನ್ನು ಎತ್ತಿದ ಬಳಿಕ, ಆ ಬಗ್ಗೆ ಅಧ್ಯಯನ ನಡೆಸುವ ಸಲುವಾಗಿ ಎರಡು ಸತ್ಯಶೋಧನಾ ಸಮಿತಿಗಳನ್ನು ಕಳುಹಿಸಲಾಗಿದೆ. ಎರಡೂ ಕೂಡಾ ವಿಭಿನ್ನ ನಿಲುವುಗಳೊಂದಿಗೆ ವಾಪಸಾಗಿವೆ. ದಿಲ್ಲಿ ಅಭಿವೃದ್ಧಿ ಪ್ರಾಧಿಕಾರ ಕಳುಹಿಸಿದ ಸತ್ಯಶೋಧನಾ ಸಮಿತಿ, ಸಮಾರಂಭ ಆಯೋಜಿಸುವ ಸ್ಥಳದಲ್ಲಿ ಯಾವುದೇ ಅಗೆತ ನಡೆದಿಲ್ಲ ಎಂದು ವರದಿ ನೀಡಿದೆ. ಆದರೆ ದಿಲ್ಲಿ ಐಐಟಿಯ ಎ.ಕೆ.ಗೋಶಿಯನ್ ನೇತೃತ್ವದ ತಂಡದ ಪ್ರಕಾರ, ವಿಸ್ತಾರವಾದ ಭೂಪ್ರದೇಶದಲ್ಲಿ ಎಲ್ಲ ನೈಸರ್ಗಿಕ ಸಸ್ಯಸಂಪತ್ತನ್ನು ಕಿತ್ತುಹಾಕಿ, ದೊಡ್ಡ ಪ್ರಮಾಣದ ನಿರ್ಮಾಣಗಳನ್ನು ಮಾಡಲಾಗಿದೆ.
ಯಮುನಾ ಜಿಯೇ ಅಭಿಯಾನದ ಕಾರ್ಯಕರ್ತ ಮನೋಜ್ ಮಿಶ್ರಾ ಅವರು ಈ ವಿವಾದವನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಗೆ ಒಯ್ದ ಬಳಿಕ ಮೂರನೆ ತನಿಖಾ ಸಮಿತಿಯನ್ನು ನೇಮಕ ಮಾಡಲಾಯಿತು. ಇದರ ನಿಲುವುಗಳ ಆಧಾರದಲ್ಲಿ ಈ ತನಿಖಾ ಸಮಿತಿಯು, ಮಹಾಮೇಳದಿಂದ ಪರಿಸರಕ್ಕೆ ಆಗುವ ಹಾನಿಯನ್ನು ಸರಿಪಡಿಸುವ ಸಲುವಾಗಿ 100-120 ಕೋಟಿ ರೂಪಾಯಿ ನಷ್ಟ ಪರಿಹಾರವನ್ನು ಆರ್ಟ್ ಆಫ್ ಲಿವಿಂಗ್ ಫೌಂಡೇಷನ್ ಭರಿಸಬೇಕು ಎಂದು ಸೂಚನೆ ನೀಡಿದೆ. ಇದೀಗ ತೀರ್ಪು ಕೂಡ ಹೊರ ಬಿದ್ದಿದೆ.ೇಂದ್ರ ವೌನ ಮುರಿಯಲಿದರೆ ಕೇಂದ್ರ ಸರಕಾರ ಏಕೆ ಈ ದುರಹಂಕಾರದ ಕ್ರಮವನ್ನು ಬೆಂಬಲಿಸುತ್ತಿದೆ ಎನ್ನುವುದು ತಿಳಿಯುತ್ತಿಲ್ಲ. ನಿರ್ಮಾಣ ಕಾರ್ಯಕ್ಕೆ ಖಾಸಗಿ ನಿರ್ಮಾಣ ಸಂಸ್ಥೆಗಳನ್ನು ಬಳಸಿಕೊಳ್ಳುವಂತೆ ಸೂಚಿಸುವ ಬದಲು ಸೇನೆಯನ್ನು ಏಕೆ ತೇಲುಸೇತುವೆ ನಿರ್ಮಾಣ ಕಾರ್ಯಕ್ಕೆ ನಿಯೋಜಿಸಿತು ಎನ್ನುವುದು ಅರ್ಥವಾಗುತ್ತಿಲ್ಲ.ಕಾರ್ಯಕ್ಕೆ ಸೈನಿಕರನ್ನು ಏಕೆ ನಿಯೋಜಿಸಬೇಕು ಎಂದು ಸೇನೆ ಕೂಡಾ ಸರಕಾರವನ್ನು ಪ್ರಶ್ನಿಸಿದೆ ಎನ್ನಲಾಗಿದೆ. ಆದರೆ ರಕ್ಷಣಾ ಸಚಿವ ಮನೋಹರ್ ಪಾರಿಕ್ಕರ್ ಅವರು, ಜನದಟ್ಟಣೆಯನ್ನು ನಿಯಂತ್ರಿಸಲು ಮತ್ತು ಕಾಲ್ತುಳಿತವನ್ನು ತಡೆಯಲು ಇಂಥ ಕ್ರಮ ಕೈಗೊಳ್ಳುವುದು ಅನಿವಾರ್ಯ ಎಂದು ಪ್ರತಿಪಾದಿಸಿದರು ಎಂಬುದಾಗಿ ಸೇನಾಧಿಕಾರಿಗಳು ಹೇಳಿದ್ದಾರೆ. ಸರಕಾರ ಇದಕ್ಕೆ ಅನುಮತಿ ನೀಡಿದ ಕಾರಣ, ಈ ಸಮಾರಂಭ ಸುಲಲಿತವಾಗಿ ನಡೆಯಲು ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವುದು ಸರಕಾರದ ಜವಾಬ್ದಾರಿ ಎಂದು ರಕ್ಷಣಾ ಸಚಿವರು ಸಮರ್ಥಿಸಿಕೊಂಡರು ಎನ್ನಲಾಗಿದೆ. ಭದ್ರತಾ ಕಾರಣಗಳಿಗಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ರಕ್ಷಣಾ ಸಚಿವಾಲಯ ಸ್ಪಷ್ಟನೆ ನೀಡಿದೆ.ದರೆ ಸರಕಾರ ಮೊದಲಾಗಿ ಅದಕ್ಕೆ ಏಕೆ ಅನುಮತಿ ನೀಡಬೇಕಿತ್ತು? ಅಂಥ ಬೃಹತ್ ನಿರ್ಮಾಣಕ್ಕೆ ಭದ್ರತೆ ನೀಡುವುದು ಏಕೆ ಕಡ್ಡಾಯವಾಗಿತ್ತು? ಎಂಬ ಪ್ರಶ್ನೆಗೆ ಕೇಂದ್ರದಿಂದ ಯಾವುದೇ ತಾರ್ಕಿಕ ಉತ್ತರ ಸಿಕ್ಕಿಲ್ಲ. ಬದಲಾಗಿ ಇವೆಲ್ಲ ಪ್ರಶ್ನೆಗಳಿಗೆ ಆರ್ಟ್ ಆಫ್ ಲಿವಿಂಗ್ ಫೌಂಡೇಷನ್ ಹಾಗೂ ರವಿಶಂಕರ್ ಅವರ ಸಮರ್ಥನೆಯಷ್ಟೇ ಕೇಳಿಬರುತ್ತಿದೆ.ವುಗಳಲ್ಲಿ ಕೆಲವು ಸ್ವೀಕಾರಾರ್ಹವಲ್ಲ. ಆರ್ಟ್ ಆಫ್ ಲಿವಿಂಗ್ ಮಹಾಮೇಳ ಕುಂಭಮೇಳದಂತೆ; ಸಾವಿರಾರು ಮಂದಿ ಇಲ್ಲಿ ವಿಸ್ತೃತ ಒಳಿತಿಗಾಗಿ ಸೇರುತ್ತಾರೆ ಎನ್ನುವುದು ಅವರ ಸಮರ್ಥನೆ. ಆದರೆ ಈ ವಿಸ್ತೃತ ಒಳಿತಿನಲ್ಲಿ ಆ ನೆಲದಲ್ಲಿ ಬದುಕು ನಡೆಸುತ್ತಾ ಬಂದ ರೈತರು ಸೇರುವುದಿಲ್ಲ. ಈ ಮೇಳಕ್ಕಾಗಿ ಅವರನ್ನು ಬಲಾತ್ಕಾರವಾಗಿ ಹೊರಗೆ ಕಳುಹಿಸಲಾಗಿದೆ.
ಮತ್ತೆ ಕೆಲವು, ದೇವಮಾನವ (ಗುರೂಜಿ) ಮುಂದಿಟ್ಟ ತರ್ಕಗಳು ಬಹುಶಃ ಇಂದ್ರಿಯಗಳ ಕಲ್ಪನೆಗೆ ನಿಲುಕದ್ದು:
ಸಾರ್ವಜನಿಕ ಹಿತಕ್ಕಾಗಿ ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸದಿದ್ದರೆ, ಸರಕಾರಕ್ಕೆ ಪರಿಸರ ಕಾಳಜಿ ಕನಿಷ್ಠ ಆದ್ಯತೆ ಎನ್ನುವ ಅಭಿಪ್ರಾಯವನ್ನು ಸರಕಾರವೇ ಬಲಪಡಿಸಿದಂತಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಕೆಲ ಪ್ರಭಾವಿ ಖಾಸಗಿ ಹಿತಾಸಕ್ತಿಗಳಷ್ಟೇ ಸರಕಾರ ಕೂಡಾ ಹೊಣೆಗಾರ ಎಂಬ ಭಾವನೆ ದಟ್ಟವಾಗುತ್ತದೆ. ಈ ಭಾವನೆಯನ್ನು ತೆಗೆದುಹಾಕಬೇಕಾದರೆ ಕೇಂದ್ರ ಸರಕಾರ ವೌನ ಮುರಿಯಬೇಕು.