ಇವುಗಳಿಂದ ನಿಮ್ಮ ತೂಕ ಕಡಿಮೆಯಾಗುವುದಿಲ್ಲ !
ಇದು ನಿಮಗೆ ತಿಳಿದಿರಲಿ
ನೀವು ತೂಕ ಕಡಿಮೆ ಮಾಡಿಕೊಳ್ಳುವ ದಾರಿಗಾಗಿ ಎರ್ರಾಬಿರ್ರಿಯಾಗಿ ಸಿಕ್ಕಿದ ವೆಬ್ ತಾಣಗಳಲ್ಲೆಲ್ಲಾ ಹುಡುಕಾಡುತ್ತೀರಾ? ಆದರೆ ಎಷ್ಟೇ ಹುಡುಕಾಡಿದರೂ ತೂಕ ಇಳಿಯುವುದಿಲ್ಲ. ತಜ್ಞರ ಪ್ರಕಾರ ತೂಕ ಇಳಿಸುವ ಬಗ್ಗೆ ಅಂತರ್ಜಾಲದಲ್ಲಿ ಅತಿಯಾಗಿ ಸುಳ್ಳು ಮಾಹಿತಿಗಳಿವೆ.
ಇಲ್ಲಿ ಅಂತಹ ಕೆಲವು ಸುಳ್ಳು ನಂಬಿಕೆಗಳ ಬಗ್ಗೆ ವಿಶ್ಲೇಷಿಸಿದ್ದೇವೆ.
ಕಲ್ಪನೆ: ಆಹಾರ ಬಿಡುವುದರಿಂದ ಸಣ್ಣಗಾಗುತ್ತೀರಿ
ವಾಸ್ತವ: ಆಹಾರ ಬಿಡುವುದರಿಂದ ಹಸಿವೆ ಹೆಚ್ಚಾಗಿ ಅತಿಯಾದ ಕೊಬ್ಬಿರುವ ಅಥವಾ ಸಕ್ಕರೆಯಂಶವಿರುವ ಆಹಾರ ಸೇವಿಸಬಹುದು. ಅಗತ್ಯ ಪೌಷ್ಠಿಕಾಂಶಗಳನ್ನೂ ಕಳೆದುಕೊಳ್ಳುವಿರಿ.
ಕಲ್ಪನೆ: ದಿನಕ್ಕೆ ಆರು ಊಟಗಳನ್ನು ತೆಗೆದುಕೊಂಡವರು ತೂಕ ಇಳಿಸಿಕೊಳ್ಳುತ್ತಾರೆ.
ವಾಸ್ತವ: ಬಹಳಷ್ಟು ಮಂದಿ ದಿನಕ್ಕೆ ಆರು ಬಾರಿ ಆಹಾರ ಸೇವಿಸುವುದರಿಂದ ತೂಕ ಇಳಿಸಬಹುದು ಎಂದುಕೊಂಡಿದ್ದಾರೆ. ಆರು ಆಹಾರ ಎಂದು ವೈದ್ಯರು ಹೇಳುವಾಗ ಅದು ಪೂರ್ಣ ಆಹಾರವಾಗಿರುವುದಿಲ್ಲ. ಆರೋಗ್ಯಕರ ಆಹಾರವನ್ನು ಮತ್ತು ಮೂರು ಸ್ನಾಕ್ ಗಳನ್ನು ದಿನಕ್ಕೆ ತಿನ್ನಬೇಕು.
ಕಲ್ಪನೆ: ಡಯಟ್ ಸೋಡಾಗಳು ಶೂನ್ಯ ಕ್ಯಾಲರಿ ಹೊಂದಿರುತ್ತವೆ
ವಾಸ್ತವ: ಶೂನ್ಯ ಕ್ಯಾಲರಿ ಎನ್ನುವ ಲೇಬಲ್ ನೋಡಿ ಡಯಟ್ ಸೋಡಾ ಕ್ಯಾನ್ ಖರೀದಿಸಿ ಮೂರ್ಖರಾಗುತ್ತೀರಿ. ನೀವು ಗಮನಿಸದೆ ಇರುವುದೆಂದರೆ ಅವುಗಳಲ್ಲಿ ಅನೇಕ ಕೃತಕ ಸಿಹಿಯನ್ನು ಹೊಂದಿರುತ್ತವೆ. ಇವು ಸಕ್ಕರೆಗಿಂತ ಹೆಚ್ಚು ತೂಕ ಬೆಳೆಸಬಹುದು. ಏಕೆಂದರೆ ಅವುಗಳು ನೀವು ಕಾರ್ಬೋಹೈಡ್ರೇಟುಗಳಿಗಾಗಿ ಪ್ರಯತ್ನಿಸುವಂತೆ ಮಾಡುತ್ತವೆ. ಆಹಾರ ಸೇವನೆ ಹೆಚ್ಚಾಗಿಸಿ ಕೊಬ್ಬು ಸಂಗ್ರಹಿಸುತ್ತದೆ. ಅಲ್ಲದೆ ಅವುಗಳು ಮೈಗ್ರೇನ್, ಖಿನ್ನತೆ ಮತ್ತು ಸ್ಮರಣಶಕ್ತಿ ನಷ್ಟಕ್ಕೆ ಕಾರಣವಾಗಬಹುದು.
ಕಲ್ಪನೆ: ಕಾರ್ಬೋಹೈಡ್ರೇಟುಗಳಿಂದ ಕೊಬ್ಬು ಬರುತ್ತದೆ
ವಾಸ್ತವ: ಉತ್ತಮ ಆಕಾರ ಪಡೆಯಲು ದೇಹದಿಂದ ಪೂರ್ಣವಾಗಿ ಕೊಬ್ಬನ್ನು ಉಳಿಸುವುದು ಉತ್ತಮವಲ್ಲ. ಸರಿಯಾದ ಪ್ರಮಾಣದಲ್ಲಿ ಸೇವಿಸಿದರೆ ಸಮತೋಲಿತ ಡಯಟ್, ಕಾರ್ಬೋಹೈಡ್ರೇಟ್ ಕೊಬ್ಬು ತರುವುದಿಲ್ಲ. ಇಡೀ ಧಾನ್ಯ ಅಥವಾ ಬ್ರೌನ್ ರೈಸ್, ಬಟಾಟೆಗಳು ಚರ್ಮದಲ್ಲಿ ಫೈಬರ್ ಅಧಿಕಗೊಳಿಸುತ್ತವೆ.
ಕಲ್ಪನೆ: ವ್ಯಾಯಾಮ ಅಥವಾ ಡಯಟ್ ಮಾತ್ರ ತೂಕ ಇಳಿಸುವ ದಾರಿ
ವಾಸ್ತವ: ಇವೆರಡು ಜೊತೆಯಾಗಿ ಹೋದಾಗಲೇ ಲಾಭ. ಸಮತೋಲಿತ ಡಯಟ್ ಹೊಂದಿರುವುದು ಅಗತ್ಯ ಮತ್ತು ತೂಕ ಇಳಿಸಿಕೊಳ್ಳಲು ನಿತ್ಯದ ವ್ಯಾಯಾಮವೂ ಬೇಕು. ಕೇವಲ ವ್ಯಾಯಾಮದಿಂದ ಪ್ರಯೋಜನವಿಲ್ಲ. ಅಥವಾ ಕೇವಲ ಆಹಾರ ಬದಲಾವಣೆಯಿಂದ ತೂಕ ಇಳಿಯದು.
ಕಲ್ಪನೆ: ಥೈರಾಯ್ಡ ದಪ್ಪ ಮಾಡುತ್ತದೆ.
ವಾಸ್ತವ: ಇದು ಥೈರಾಯ್ಡ ಸಮಸ್ಯೆಯಿಂದ ಬಳಲುವವರ ಅಭಿಪ್ರಾಯ. ಆದರೆ ಥೈರಾಯ್ಡಾ ತೂಕ ಏರಿಸುವುದು ಅಪರೂಪ. ಅದು 0.5-2 ಕೇಜಿ ತೂಕ ಏರಿಸಬಹುದು ಅಷ್ಟೆ.
ಕಲ್ಪನೆ: ನೀರಿನ ಧಾರಣೆ ಕೊಬ್ಬು ಬೆಳೆಸುತ್ತದೆ.
ವಾಸ್ತವ: ಗಂಭೀರ ಮೂತ್ರಪಿಂಡ ಸಮಸ್ಯೆ ಇರುವ ಹೊರತಾಗಿ ನೀರಿಗೂ ತೂಕ ಏರುವುದಕ್ಕೂ ಸಂಬಂಧವಿಲ್ಲ. ನೀರು ಸೇವನೆಯಿಂದ ದಪ್ಪಗಾಗುವುದಿಲ್ಲ. 0.5-2.5 ಕೇಜಿ ತೂಕ ಏರಿಸಬಹುದು ಅಷ್ಟೆ.
ಕಲ್ಪನೆ: ಕ್ಯಾಲರಿಗಳನ್ನು ಇಳಿಸುವುದರಿಂದ ಸಣಕಲಾಗುವಿರಿ
ವಾಸ್ತವ: ಕ್ಯಾಲರಿಗಳನ್ನು ಇಳಿಸುವುದರಿಂದಲೇ ಸಣ್ಣಗಾಗುವುದಿಲ್ಲ. ಕ್ಯಾಲರಿ ಲೆಕ್ಕಾಚಾರ ಹೊರತುಪಡಿಸಿ ನಿಮ್ಮ ಆಹಾರದಲ್ಲಿರುವ ಕ್ಯಾಲರಿಗಳ ಗುಣಮಟ್ಟ ಗುರುತಿಸಬೇಕು.
ಉತ್ತಮ ಕ್ಯಾಲರಿ ಮತ್ತು ಕೆಟ್ಟ ಕ್ಯಾಲರಿಗಳ ವ್ಯತ್ಯಾಸ ಕಂಡುಹಿಡಿಯಬೇಕು. ಉದಾಹರಣೆಗೆ 100 ಗ್ರಾಂ ಬಟಾಟೆ ಬಜ್ಜಿ ಮತ್ತು 100 ಗ್ರಾಂ ಬಾಳೆಹಣ್ಣು ಎರಡರಲ್ಲೂ ಸಮಾನ ಕ್ಯಾಲರಿಗಳಿರುತ್ತವೆ. ಬಾಳೆಹಣ್ಣಿನಿಂದ ತೂಕ ಏರುವುದಿಲ್ಲ, ಆದರೆ ಬಟಾಟೆಯ ಬಗ್ಗೆ ಹೇಳಲಾಗದು.
ಕಲ್ಪನೆ: ಹಣ್ಣುಗಳಿಂದ ದಪ್ಪಗಾಗುತ್ತೇವೆ
ವಾಸ್ತವ: ಹಣ್ಣುಗಳಿಂದ ತೂಕ ಏರುತ್ತದೆ ಎನ್ನುವುದು ಸುಳ್ಳು. ಸಕ್ಕರೆ ತಾಜಾ ವಸ್ತುಗಳಿಂದ ಒಳಹೋದರೆ ತೂಕ ಏರುವುದಿಲ್ಲ. ಹಣ್ಣುಗಳನ್ನು ತಿಂದು ಯಾರೂ ದಪ್ಪಗಾಗುವುದಿಲ್ಲ. ಪ್ಯಾಕೇಜ್ಡ್ ಹಣ್ಣಿನ ಪಾನೀಯಗಳು ಮತ್ತು ಕ್ಯಾನಲ್ಲಿ ಸಿಗುವ ಹಣ್ಣುಗಳಿಂದ ತೂಕ ಏರುತ್ತದೆ.