ನಿಮ್ಮ ತಪ್ಪುಗಳನ್ನು ನೀವು ನಿರ್ಲಕ್ಷಿಸುತ್ತಿದ್ದೀರಾ? ಹಾಗಿದ್ದರೆ ಪೈನ್ ಕಿಲ್ಲರ್ ತಿನ್ನುವ ತಪ್ಪು ಮಾಡಬೇಡಿ!
ಹೊಸ ಅಧ್ಯಯನವೊಂದು ಹೇಳಿರುವ ಪ್ರಕಾರ ನೋವಿಗೆ ನುಂಗುವ ಗುಳಿಗೆಗಳು ಮೆದುಳಿನ ದೋಷ ಪತ್ತೆ ಹಚ್ಚುವ ಪ್ರಕ್ರಿಯೆಯನ್ನು ಕುಸಿಯುವಂತೆ ಮಾಡುವ ಸಾಧ್ಯತೆಯಿದೆ.
ಟೊರಾಂಟೊ ವಿಶ್ವವಿದ್ಯಾಲಯದ ಸಂಶೋಧನೆಯು ಹೇಗೆ ನೋವುನಿವಾರಕ ಗುಳಿಗೆಗಳಾಗಿರುವ ಆಸಿಟಮಿನೊಫೆನ್ ಮೊದಲಾದವು ಧೋಷಗಳಿಗೆ ಸಂಬಂಧಿಸಿದ ಮೆದುಳಿನ ಪ್ರತಿಕ್ರಿಯೆಯನ್ನು ಕಡಿತಗೊಳಿಸುತ್ತದೆ ಎಂದು ವಿವರಿಸಿದೆ. ಅಸಿಟಮಿನೊಫೆನ್ ಹೇಗೆ ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ ಎನ್ನುವುದನ್ನು ನಾವು ಪೂರ್ಣವಾಗಿ ಅರ್ಥ ಮಾಡಿಕೊಳ್ಳದೇ ಇರುವುದೇ ನಮ್ಮ ಅಧ್ಯಯನಕ್ಕೆ ಮೂಲವಾಗಿದೆ. ಅಸಿಟಮಿನೊಫೆನ್ ಕುರಿತಾಗಿ ಇತ್ತೀಚೆಗೆ ನಡವಳಿಕೆ ಸಂಶೋಧನೆ ನಡೆದಿದೆ. ನರವ್ಯೆಹದೊಳಗೆ ಎಂತಹ ಪರಿಣಾಮವಾಗುತ್ತದೆ ಎಂದು ನಾವು ತಿಳಿದುಕೊಳ್ಳಲು ಪ್ರಯತ್ನಿಸಿದ್ದೇವೆ ಎಂದು ಸಂಶೋಧಕ ಡಾನ್ ರಾಂಡಲ್ಸ್ ಹೇಳಿದ್ದಾರೆ.
ಕಲ್ಪನೆಯನ್ನು ಪರೀಕ್ಷಿಸಲು 30 ಮಂದಿಯ ಎರಡು ಸಮೂಹಗಳಿಗೆ ಗೋ ಅಥವಾ ನೋ ಗೋ ಎನ್ನುವ ಎರಡು ಗುರಿ ಪತ್ತೆ ಕಾರ್ಯವನ್ನು ಕೊಡಲಾಯಿತು. ಪ್ರತೀ ಬಾರಿ ಸ್ಕ್ರೀನಿನಲ್ಲಿ ಎಫ್ ಎನ್ನುವ ಶಬ್ದ ಬಂದಾಗ ಗೋ ಎನ್ನುವ ಬಟನ್ ಒತ್ತಲು ಪ್ರತಿನಿಧಿಗಳಿಗೆ ಹೇಳಲಾಯಿತು. ಆದರೆ ಸ್ಕ್ರೀನಿನಲ್ಲಿ ಇ ಶಬ್ದ ಬಂದಾಗ ಬಟನ್ ಒತ್ತುವಂತಿಲ್ಲ. ಎಲ್ಲಾ ಗೋ ಗಳನ್ನು ಪತ್ತೆ ಮಾಡಿ ತ್ವರಿತವಾಗಿ ಬಟನ್ ಒತ್ತಬೇಕಾಗುತ್ತದೆ. ಆದರೆ ನೋ ಗೋ ಬರುವಾಗ ನಿಲ್ಲಬೇಕಾಗುತ್ತದೆ. ಅಸಿಟಮಿನೊಫೆನ್ ಸೇವಿಸಿದವರಿಗೆ ಈ ಧೋಷ ಪತ್ತೆ ಮಾಡುವುದು ಕಷ್ಟವಾಗಿರುವುದು ಕಂಡು ಬಂದಿದೆ. ಇದರಿಂದ ಅವರ ನಿತ್ಯದ ಜೀವನದಲ್ಲೂ ಗ್ರಹಣದ ನಿಯಂತ್ರಣದಲ್ಲಿ ಕಷ್ಟವಾಗಿರುವ ಸಾಧ್ಯತೆ ಇದೆ ಎಂದು ರಾಂಡಲ್ಸ್ ಅಭಿಪ್ರಾಯಪಟ್ಟಿದ್ದಾರೆ.
ಅಸಿಟಮಿನೊಫೆನ್ ಸೇವನೆ ಸಂದರ್ಭದಲ್ಲಿ ದೋಷಗಳನ್ನು ಪತ್ತೆ ಮಾಡಲು ಸಾಧ್ಯವಾಗದ ವ್ಯಕ್ತಿಗಳು ತಮ್ಮ ನಿತ್ಯದ ಕೆಲಸದಲ್ಲಿ ಧೋಷಗಳನ್ನು ಮಾಡುತ್ತಾರೆಯೇ ಎನ್ನುವ ಬಗ್ಗೆಯೂ ಅಧ್ಯಯನ ನಡೆಯುತ್ತಿದೆ. ಇದಕ್ಕಾಗಿ ಹೆಚ್ಚಿನ ಅಧ್ಯಯನದ ಅಗತ್ಯವಿದೆ ಎಂದು ಸಂಶೋಧಕರು ಹೇಳಿದ್ದಾರೆ.