ಜೀವನದಲ್ಲೊಮ್ಮೆ ಚೋರ್ ಬಜಾರ್ಗೆ ಭೇಟಿ ನೀಡಲೇಬೇಕು
ಇಲ್ಲಿವೆ 14 ಕಾರಣಗಳು
ಚೋರ್ ಬಜಾರ್ ಕಲ್ಪನೆ ಭಾರತದಲ್ಲಿ ಮಾತ್ರ ಇರುವ ವಿಶಿಷ್ಟತೆ. ಇದು ಪ್ರತೀ ಗ್ರಾಹಕನ ಸ್ವರ್ಗ. ದೇಶದ ಪ್ರಸಿದ್ಧ ಚೋರ್ ಬಜಾರ್ ಮುಂಬೈನಲ್ಲಿದೆ. ಈ ಪ್ರಸಿದ್ಧ ಶಾಪಿಂಗ್ ತಾಣವನ್ನು ಮೂಲತಃ ಶೋರ್ ಬಜಾರ್ ಎಂದು ಕರೆಯಲಾಗಿತ್ತು. ಬ್ರಿಟಿಷರು ತಪ್ಪು ಉಚ್ಛರಿಸುವ ಕಾರಣ ಇದು ಚೋರ್ ಆಯಿತು. ಆಗಲೇ ಕದ್ದ ಮಾಲುಗಳು ಈ ಮಾರುಕಟ್ಟೆಗೆ ಪ್ರವೇಶಿಸಲು ಆರಂಭಿಸಿದ್ದು. ದೇಶದಲ್ಲಿ ಹೈದರಾಬಾದ್, ಮೀರತ್ ಮತ್ತು ಚೆನ್ನೈನಲ್ಲೂ ಈಗ ಚೋರ್ ಬಜಾರ್ಗಳಿವೆ. ಈ ಮಾರುಕಟ್ಟೆಗೆ ಭೇಟಿ ನೀಡಲು 14 ಕಾರಣಗಳು ಇಲ್ಲಿವೆ.
►ಈ ಹಿಂದೆಂದೂ ಕಾಣದ ವಸ್ತುಗಳು ನಿಜವಾಗಿ ಇಲ್ಲಿ ಸಿಗುತ್ತವೆ. ಕಂಚಿನ ವಸ್ತುಗಳು, ಪುಸ್ತಕಗಳು, ಪೋಸ್ಟರಿನಿಂದ ಆರಂಭಿಸಿ ಸೆಕೆಂಡ್ ಹ್ಯಾಂಡ್ ಆಟೋಮೊಬೈಲ್ ಭಾಗಗಳು ಸಿಗುತ್ತವೆ.
►ಹಳೇ ಸರಕುಗಳು ಚೋರ್ ಬಾಜಾರುಗಳಲ್ಲಿ ವಿಶೇಷ ಮತ್ತು ಹಳೇ ಜಗತ್ತಿನ ವಸ್ತುಗಳನ್ನು ಇಲ್ಲಿ ಖರೀದಿಸಬಹುದು. ಟೈಪ್ ರೈಟರುಗಳು ಮತ್ತು ಹಳೇ ಕ್ಯಾಮರಾಗಳೂ ಇಲ್ಲಿ ಸಿಗುತ್ತವೆ.
► ಇವುಗಳು ಕಿರಿದಾದ ಗಲ್ಲಿಗಳು. ಆದರೆ ಬಾಯಲ್ಲಿ ನೀರೂರಿಸುವ ಕಬಾಬ್ಗಳನ್ನು ನೀವು ಮಿಸ್ ಮಾಡುವ ಹಾಗೇ ಇಲ್ಲ.
► ಚೋರ್ ಬಜಾರ್ಗೆ ಒಮ್ಮೆ ಭೇಟಿ ನೀಡಿದರೆ ನಿಮ್ಮ ಚೌಕಾಸಿ ಮಾಡುವ ಪ್ರತಿಭೆ ಸಾಣೆ ಹಿಡಿಯಲಿದೆ.
►ಖರೀದಿದಾರರ ಸ್ವರ್ಗವನ್ನು ಹೊರತುಪಡಿಸಿ ಚೋರ್ ಬಜಾರ್ ಹವ್ಯಾಸಿ ಫೋಟೋಗ್ರಾಫರಿಗೆ ಉತ್ತಮ ತಾಣ.
►ಹಾಳಾದ ಕಾರನ್ನು ಮರಳಿ ಬದಲಿಸಬೇಕಿದ್ದರೆ ಇಲ್ಲಿ ಎಲ್ಲಾ ಭಾಗಗಳು ಸಿಗಲಿವೆ. ಚೆನ್ನೈನ ಪುದುಪೆಟ್ಟೈ ಮತ್ತು ಮೀರತಿನ ಸೋಟಿ ಗಂಜ್ ಮಾರ್ಕೆಟ್ ಅಕ್ಷರಶಃ ಕಾರು ಸ್ಮಶಾನಗಳು.
►ಹಳೇ ದಾಖಲೆಗಳು ಬೇಕಿದ್ದರೆ, ಅವುಗಳನ್ನಿಡುವ ಅಂಗಡಿಗಳೂ ಇವೆ. ಇವುಗಳು 100 ವರ್ಷ ಹಳೇಯವು ಕೂಡ ಆಗಿರಬಹುದು.
► ಚಿನ್ನದ ಗಣಿ ಹುಡುಕಿದ ಶಾಪಿಂಗ್ ಅನುಭವ ಸಿಗುವ ತಾಣ ಇದೊಂದೇ. ಎಲ್ಲರಿಗೂ ಏನಾದರೊಂದು ಇಲ್ಲಿದೆ. ಅದಕ್ಕಾಗಿ ಸಾಕಷ್ಟು ಸಮಯ ಹುಡುಕಬೇಕು.
► ಬಾಲಿವುಡ್ ಪೋಸ್ಟರುಗಳಿಗಿಂತ ಹೆಚ್ಚಿನದು ನಿಮಗೆ ಆಕರ್ಷಿಸುವುದಿಲ್ಲ.
► ರಾಣಿ ವಿಕ್ಟೋರಿಯಳಿಗೆ ಸೇರಿದ ವಯಲಿನ್ ಮತ್ತಿತರ ವಸ್ತುಗಳು ಹಡಗಿನಿಂದ ಕಾಣೆಯಾಗಿ ಮುಂಬೈ ಚೋರ್ ಬಜಾರಲ್ಲಿ ಮಾರಾಟವಾಗಿದೆ ಎನ್ನುವುದು ಸತ್ಯವೇ ಇರಬಹುದು. ಯಾರಿಗೆ ಗೊತ್ತು?
►ಚೋರ್ ಬಾಜಾರ್ ಬಗ್ಗೆ ಕಾಲ ಕಾಲಕ್ಕೆ ಬರೆಯುತ್ತಲೇ ಇದ್ದೇವೆ. ನಿಮಗೂ ಬರೆಯಲು ಇಲ್ಲಿ ಪ್ರೇರಣೆ ಸಿಗಬಹುದು.
►100 ವರ್ಷದ ಪರಂಪರೆಯ ಅನುಭವ ಪಡೆಯುವುದನ್ನು ಕಳೆದುಕೊಳ್ಳಬೇಡಿ.
► ಈ ಹಿಂದೆ ನಿಮ್ಮ ಸ್ಥಳದಿಂದಲೇ ಕಾಣೆಯಾದ ವಸ್ತು ಇಲ್ಲಿ ಕಂಡು ಬರಬಹುದು. ಕೆಲವೊಮ್ಮೆ ಅದನ್ನು ಬಿಡುವುದೂ ಕಷ್ಟವಾಗುತ್ತದೆ.
►ಮುಖ್ಯವಾಗಿ ಇದು ಚೋರ್ ಬಜಾರ್ ಆಗಿದ್ದಕ್ಕೆ ಒಮ್ಮೆ ಭೇಟಿ ನೀಡಿ!