ಅನ್ನ ಬಿಡಲು ಸಾಧ್ಯವಿಲ್ಲವೆ? ಹಾಗಾದರೆ ಅದರಲ್ಲಿರುವ ಕ್ಯಾಲೊರಿ ಕಡಿಮೆ ಮಾಡಿಕೊಳ್ಳಿ
ಜಾಗತಿಕವಾಗಿ ಅನ್ನ ಬಹಳ ಜನಪ್ರಿಯ ಆಹಾರ. ಯಾವುದೇ ಆಹಾರದ ಜತೆಯೂ ಇದನ್ನು ಜೊತೆಗೂಡಿಸಬಹುದು ಎನ್ನುವ ಕಾರಣಕ್ಕೇ ಇದು ಪ್ರಸಿದ್ಧ. ಆದರೆ ಬಹಳ ಸ್ಟಾರ್ಚ್ ಇರುವುದು ಮತ್ತು ಮಧುಮೇಹದ ಸಮಸ್ಯೆ ಕಾಡುವ ಭಯ ಇರುವ ಕಾರಣ ಇದು ಆರೋಗ್ಯಕರವಾದ ಆಹಾರವೇನೂ ಎಲ್ಲ. ಒಂದು ಕಪ್ ಅನ್ನದಲ್ಲಿ 200 ಕ್ಯಾಲರಿ ಸ್ಟಾರ್ಚ್ ಇದೆ. ಕೊಬ್ಬಿಗೂ ಇದು ಕಾರಣ. ಆದರೆ ನೀವು ಅನ್ನ ಬೇಯಿಸುವ ರೀತಿಯಲ್ಲಿ ಕ್ಯಾಲರಿ ಕಡಿಮೆ ಮಾಡಬಹುದು.
ಪಾತ್ರೆಗೆ ನೀರು ಹಾಕಿ ಅದನ್ನು ಕುದಿಸಿ.
ಸ್ವಲ್ಪ ತೆಂಗಿನ ಎಣ್ಣೆ ತೆಗೆದುಕೊಂಡು ಕುದಿಯುವ ನೀರಿಗೆ ಹಾಕಿ.
ಪಾತ್ರೆಗೆ ಅಕ್ಕಿ ಹಾಕಿ ಚೆನ್ನಾಗಿ ಬೇಯಿಸಿ
12 ಗಂಟೆಗಳ ಕಾಲ ಫ್ರಿಜ್ನಲ್ಲಿ ತಂಪಾಗಲು ಇಡಿ.
ಈಗ ನೀವು ಶೇ. 60ರಷ್ಟು ಕಡಿಮೆ ಕ್ಯಾಲರಿಯಲ್ಲಿ ಅನ್ನ ತಿನ್ನಬಹುದು.
ಎಲ್ಲಾ ಸ್ಟಾರ್ಚ್ ಒಂದೇ ಸಮನಾಗಿರುವುದಿಲ್ಲ. ಕೆಲವು ಶೀಘ್ರವಾಗಿ ಜೀರ್ಣಗೊಳ್ಳುತ್ತವೆ. ಅವುಗಳು ವೇಗವಾಗಿ ಗ್ಲುಕೋಸ್ ಆಗಿ ನಂತರ ಗ್ಲೈಕೋಜಿನ್ ಆಗುತ್ತವೆ. ಬಹಳ ಗ್ಲೈಕೋಜಿನ್ ಕೊಬ್ಬು ಏರಿಸುತ್ತದೆ. ಅದನ್ನು ಕರಗಿಸುವ ಅಗತ್ಯವಿದೆ. ನಿರೋಧಕ ಶಕ್ತಿ ಇರುವ ಸ್ಟಾರ್ಚ್ಗಳು ನಿಧಾನವಾಗಿ ಜೀರ್ಣಗೊಳ್ಳುತ್ತವೆ ಮತ್ತು ಗ್ಲುಕೋಸ್ ಅಥವಾ ಗ್ಲೈಕೋಜಿನ್ ಆಗುವುದಿಲ್ಲ. ಬೇಯಿಸುವ ಕ್ರಮ ಬದಲಾದರೆ ಕೆಲವು ರೀತಿಯ ಸ್ಟಾರ್ಚ್ ಬದಲಾಯಿಸಬಹುದು ಎಂದು ಅಧ್ಯಯನಗಳು ಹೇಳಿವೆ. ಬೇಯಿಸಿದಾಗ ಸ್ಟಾರ್ಚ್ ಅನಾರೋಗ್ಯಕರವಾಗುತ್ತವೆ.
ತೆಂಗಿನೆಣ್ಣೆ ಒಂದು ಮೇದಸ್ಸು. ಅನ್ನ ಬೇಯಿಸುವಾಗ ಸೇರಿಸಿದರೆ ಅನ್ನದ ಸ್ಟಾರ್ಚ್ ಸುಧಾರಿಸುತ್ತದೆ. ಫ್ರಿಜ್ನಲ್ಲಿ ಇಟ್ಟಾಗ ಸ್ಟಾರ್ಚ್ ವಿಧವನ್ನೂ ಅದು ಬದಲಿಸುತ್ತದೆ. ಈ ಪ್ರಕ್ರಿಯೆ ಅನ್ನವನ್ನು ಆರೋಗ್ಯಕರಗೊಳಿಸಿ ಕಡಿಮೆ ಕ್ಯಾಲರಿ ಇರುವಂತೆ ಮಾಡುತ್ತದೆ.
ಕೃಪೆ:www.wellnessbin.com