‘ರಮೇಶ್ಕುಮಾರ್ ಒಳ್ಳೆಯ ವಕೀಲರು’
ಬೆಂಗಳೂರು, ಜು. 13: ಆರೋಗ್ಯ ಸಚಿವ ಕೆ.ಆರ್.ರಮೇಶ್ಕುಮಾರ್ ಅವರು ಕಾನೂನು ಪದವಿ ಅಧ್ಯಯನ ಮಾಡದಿದ್ದರೂ ಉತ್ತಮ ವಕೀಲರಾಗಿ ದ್ದಾರೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದು, ವಿಧಾನಸಭೆಯಲ್ಲಿ ಸ್ವಾರಸ್ಯಕರ ಚರ್ಚೆಗೆ ಕಾರಣವಾಯಿತು.
ಬುಧವಾರ ವಿಧಾನಸಭೆಯಲ್ಲಿ ಗಣಪತಿ ತ್ಮಹತ್ಯೆ ಪ್ರಕರಣ ಸಂಬಂಧ ಉತ್ತರ ನೀಡುತ್ತಿದ್ದ ವೇಳೆ, ಸ್ಪೀಕರ್ ಕೋಳಿವಾಡ ಅವರನ್ನು ಕುರಿತು ‘ನೀವು ಒಳ್ಳೆಯ ವಕೀಲರಿದ್ದೀರಿ, ವಕೀಲಿ ವೃತ್ತಿಯನ್ನು ಮಾಡಿದ್ದೀರಿ. ಆದರೆ ನಮ್ಮ ದೇಶಪಾಂಡೆ ವಕೀಲಿಕೆ ಮಾಡಲಿಲ್ಲ’ ಎಂದು ಚಟಾಕಿ ಹಾರಿಸಿದರು. ಮುಂದುವರಿದು ರಮೇಶ್ಕುಮಾರ್ ಅವರು ಕಾನೂನು ಪದವಿ ಅಧ್ಯಯನ ಮಾಡದೆ ಒಳ್ಳೆಯ ವಕೀಲರಾಗಿ ದ್ದಾರೆಂದು ಹೇಳಿದ ಹಿನ್ನೆಲೆಯಲ್ಲಿ ಇಡೀ ಸದನ ನಗೆಗಡಲಲ್ಲಿ ತೇಲಿತು.
ಸಚಿವ ದೇಶಪಾಂಡೆ ಕಾನೂನು ಪದವಿ ಪಡೆದಿದ್ದರೂ ಒಳ್ಳೆಯ ವಕೀಲರಲ್ಲ. ಆದರೆ, ಅವರ ತಂದೆ ಒಳ್ಳೆಯ ವಕೀಲ ರಾಗಿದ್ದರು. ‘ಹೊಸ ವೈದ್ಯನಿಗಿಂತ ಹಳೇ ರೋಗಿಯೇ ಉತ್ತಮ’ ಎಂಬ ಮಾತಿ ನಂತೆ ಕೆಲ ಬುದ್ಧಿವಂತರು ಕಾನೂನು ಪದವಿ ಯನ್ನು ಪಡೆಯದೇ ಒಳ್ಳೆಯ ವಕೀಲಿಕೆ ಮಾಡುತ್ತಿರುತ್ತಾರೆಂದು ಹೇಳಿದರು.ಹಂತದಲ್ಲಿ ಮಧ್ಯ ಪ್ರವೇಶಿಸಿದ ಬಿಜೆಪಿ ಸದಸ್ಯ ಅಪ್ಪಚ್ಚುರಂಜನ್, ಮುಖ್ಯಮಂತ್ರಿಗಳೇ ತಾವು ಇಲ್ಲೂ ಒಳ್ಳೆಯ ವಾದ ಮಂಡಿಸುತ್ತಿದ್ದೀರಿ ಎಂದು ಕಾಲೆಳೆಯಲು ಪ್ರಯತ್ನಿಸಿದರು. ಇದಕ್ಕೆ ಅಷ್ಟೇ ವೇಗವಾಗಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ನಿಮ್ಮ ವಕಾಲತ್ತುಗಳಿದ್ದರೆ ನೀಡಿ 2018ರ ಬಳಿಕ ನಿಮ್ಮ ಪರವಾಗಿ ವಾದ ಮಾಡುತ್ತೇನೆ ಎಂದಾಗ ಸದನ ಹಾಸ್ಯಮಯವಾಯಿತು.