ಇಂದಿನಿಂದ ತರಬೇತಿ ಶಿಬಿರ
‘ಹಜ್ಯಾತ್ರೆ-2016’
ಬೆಂಗಳೂರು, ಜು.29: ಪ್ರಸಕ್ತ ಸಾಲಿನ ಪವಿತ್ರ ಹಜ್ಯಾತ್ರೆ ಕೈಗೊಳ್ಳಲಿರುವ ಯಾತ್ರಾರ್ಥಿಗಳಿಗಾಗಿ ರಾಜ್ಯ ಹಜ್ ಸಮಿತಿ ಹಾಗೂ ಬೆಂಗಳೂರಿನ ಇಂಡಿಯನ್ ಹಜ್ ಟ್ರೈನಿಂಗ್ ೆರಂ ವತಿಯಿಂದ ಜು.30 ಹಾಗೂ 31ರಂದು ತರಬೇತಿ ಶಿಬಿರವನ್ನು ಆಯೋಜಿಸಲಾಗಿದೆ.
ನಗರದ ಅರಮನೆ ಮೈದಾನದಲ್ಲಿನ ಟೆನ್ನಿಸ್ ಪೆವಿಲಿಯನ್ನಲ್ಲಿ ಜು.30ರಂದು ಬೆಳಗ್ಗೆ 10 ಗಂಟೆಗೆ ತರಬೇತಿ ಶಿಬಿರಕ್ಕೆ ಚಾಲನೆ ಸಿಗಲಿದ್ದು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ ಜಿಲ್ಲೆಗಳ ಸುಮಾರು 1200 ಮಂದಿ ಯಾತ್ರಾರ್ಥಿಗಳು ಶಿಬಿರದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.ತರಬೇತಿಯಲ್ಲಿ ಯಾತ್ರಾರ್ಥಿಗಳು ಹಜ್ ಯಾತ್ರೆ ಸಂದ ರ್ಭದಲ್ಲಿ ಅನುಸರಿಸಬೇಕಾದ ಧಾರ್ಮಿಕ ವಿ ವಿಧಾನಗಳು, ಯಾತ್ರೆಯ ಸಿದ್ಧತೆ, ವಿಮಾನ ಪ್ರಯಾಣ, ಪವಿತ್ರ ಮಕ್ಕಾ ಹಾಗೂ ಮದೀನಾ ನಗರಗಳಲ್ಲಿ ವಸತಿ, ಊಟದ ವ್ಯವಸ್ಥೆ, ಹಜ್ ನಿರ್ವಹಿಸುವ ಐದು ದಿನಗಳ ವಿವರ, ಮಿನಾ ಮತ್ತು ಅರಾತ್ಗೆ ತೆರಳುವ ರೈಲು ಹಾಗೂ ಬಸ್ಸುಗಳ ಪ್ರಯಾಣದ ವಿವರ, ಕಸ್ಟಮ್ಸ್ಗಳ ಬಗ್ಗೆ ಯಾತ್ರಾರ್ಥಿಗಳಿಗೆ ವಿವರಣೆ ನೀಡಲಾಗುವುದು.ನೆ ಸಾಲಿನ ಹಜ್ ಯಾತ್ರೆ ಸಂದರ್ಭದಲ್ಲಿ ಸಂಭವಿಸಿದ ದುರ್ಘಟನೆಯ ಹಿನ್ನೆಲೆಯಲ್ಲಿ ಸಾಮಾಜಿಕ ದೃಷ್ಟಿಕೋನದಿಂದ ಯಾತ್ರಾರ್ಥಿಗಳಿಗೆ ವಿಪತ್ತು ನಿರ್ವಹಣೆಗೆ ಸಂಬಂಸಿದ ತರ ಬೇತಿಯನ್ನು ನೀಡಲಾಗುವುದು. ಇಂಡಿಯನ್ ಹಜ್ ಟ್ರೈನಿಂಗ್ ೆರಂ ವತಿಯಿಂದ ವೌಲಾನ ಲುತುಲ್ಲಾ ಮಝ್ಹರ್ ರಶಾದಿ, ನಿವೃತ್ತ ಕೆಎಎಸ್ ಅಕಾರಿ ಸೈಯದ್ ಎಜಾಝ್ ಅಹ್ಮದ್ ಹಾಗೂ ಡಾ.ಪ್ರೊ.ಬಿ.ರಿಯಾಝ್ ಬಾಷಾ ತರಬೇತಿ ನೀಡಲಿದ್ದಾರೆ.
ರಾಜ್ಯ ಹಜ್ ಸಮಿತಿಯಿಂದ ಹಜ್ಯಾತ್ರೆಗೆ ತೆರಳುವ ಯಾತ್ರಿಗಳೊಂದಿಗೆ ಖಾಸಗಿ ಟೂರ್ ಆಪರೇಟರ್ಗಳ ಮೂಲಕ ಯಾತ್ರೆಗೆ ತೆರಳುತ್ತಿರುವವರಿಗೂ ತರಬೇತಿ ನೀಡಲಾಗುತ್ತದೆ. ಎರಡು ದಿನಗಳ ತರಬೇತಿ ಸಂದರ್ಭದಲ್ಲಿ ಯಾತ್ರಾರ್ಥಿಗಳಿಗೆ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ.