ಲೋಕಾಯುಕ್ತ ಲಂಚ ಪ್ರಕರಣ ಆರೋಪಿಗಳಿಗೆ ಜಾಮೀನು
ಬೆಂಗಳೂರು, ಸೆ.19: ಲೋಕಾಯುಕ್ತ ಸಂಸ್ಥೆಯನ್ನೇ ಅಲುಗಾಡಿಸಿದ್ದ ಲಂಚ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹೈಕೋರ್ಟ್ ಎಂಟು ಜನ ಆರೋಪಿಗಳಿಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ. ಈ ಸಂಬಂಧ ಮಾಜಿ ಲೋಕಾಯುಕ್ತ ಡಾ.ವೈ.ಭಾಸ್ಕರ್ರಾವ್ ಪುತ್ರ ಅಶ್ವಿನ್ರಾವ್ ಸೇರಿ ಮತ್ತಿತರರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರತ್ನಕಲಾ ಅವರಿದ್ದ ನ್ಯಾಯಪೀಠವು ಮಾಜಿ ಲೋಕಾಯುಕ್ತ ಡಾ.ವೈ.ಭಾಸ್ಕರ್ರಾವ್ ಪುತ್ರ ಅಶ್ವಿನ್ರಾವ್, ಶಂಕರೇಗೌಡ, ನರಸಿಂಹಮೂರ್ತಿ, ರಾಜಶೇಖರ್, ಮುಹಮ್ಮದ್ ಸಾದಿಕ್, ಅಶೋಕ್ಕುಮಾರ್ ಸೇರಿ ಒಟ್ಟು ಎಂಟು ಮಂದಿ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿದೆ.ರ್ ದಾರರ ಪರ ವಾದಿಸಿದ ವಕೀಲರು, ಆರೋಪಿ ಅಶ್ವಿನ್ರಾವ್ ಸೇರಿ ಒಂಬತ್ತು ಜನ ಆರೋಪಿಗಳು ಈಗಾಗಲೇ 13 ತಿಂಗಳಿನಿಂದ ಜೈಲಿನಲ್ಲಿದ್ದಾರೆ. ಅಲ್ಲದೆ, ಪೊಲೀಸರೂ ಈಗಾಗಲೇ ಈ ಎಲ್ಲ ಆರೋಪಿಗಳ ವಿರುದ್ಧ ಚಾರ್ಜ್ಸೀಟ್ನ್ನು ಸಲ್ಲಿಸಿದ್ದಾರೆ. ಹೀಗಾಗಿ, ಈ ಪ್ರಕರಣ ಕೂಡ ಜಾಮೀನು ಮಂಜೂರು ಮಾಡುವ ಪ್ರಕರಣವಾಗಿದ್ದರಿಂದ ಎಲ್ಲರಿಗೂ ಜಾಮೀನು ನೀಡಬೇಕೆಂದು ನ್ಯಾಯಪೀಠಕ್ಕೆ ತಿಳಿಸಿದರು.
ನ್ಯಾಯಪೀಠವು ವಕೀಲರ ವಾದ ಪ್ರತಿವಾದವನ್ನು ಆಲಿಸಿ ಎಂಟು ಜನರಿಗೆ ಮಾತ್ರ ಜಾಮೀನು ಮಂಜೂರು ಮಾಡಿತು. ಅಲ್ಲದೆ, ತಲಾ 1 ಲಕ್ಷ ರೂ.ಬಾಂಡ್, ಒಬ್ಬರ ಶ್ಯೂರಿಟಿ, ವಿಚಾರಣೆಗೆ ಕರೆದಾಗ ಹಾಜರಾಗಬೇಕು, ಸಾಕ್ಷನಾಶ ಮಾಡಬಾರದು, ಪಾಸ್ಪೋರ್ಟ್ಗಳನ್ನು ತನಿಖಾ ಅಕಾರಿಗಳಿಗೆ ನೀಡಬೇಕು ಸೇರಿದಂತೆ ಇತರೆ ಷರತ್ತುಗಳನ್ನು ವಿಸಿ ಜಾಮೀನು ಮಂಜೂರು ಮಾಡಿದೆ.