ಮೊಬೈಲ್ ಟವರ್ಗೆ ಬೆಂಕಿ
ಬೆಂಗಳೂರು, ಅ.23: ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಮನೆ ಮೇಲಿದ್ದ ಮೊಬೈಲ್ ಟವರ್ವೊಂದಕ್ಕೆ ಆಕಸ್ಮಿಕ ಬೆಂಕಿ ತಗುಲಿರುವ ಘಟನೆ ಇಲ್ಲಿನ ಕೆಆರ್ ಪುರಂ ಪೊಲೀಸ್ ಠಾಣಾ ವ್ಯಾಪ್ತಿ ನಡೆದಿದೆ.
ರವಿವಾರ ಮಧ್ಯಾಹ್ನ 12:30 ಗಂಟೆ ಸುಮಾರಿಗೆ ನಗರದ ಕೆಆರ್ ಪುರಂ ವ್ಯಾಪ್ತಿಯ ದೇವಸಂದ್ರದಲ್ಲಿರುವ ವೆಂಕಟೇಶ್ವರ ಟೆಂಟ್ ರಸ್ತೆ ಸಮೀಪದ ಮನೆ ಮೇಲಿದ್ದ ಮೊಬೈಲ್ ಟವರ್ವೊಂದಕ್ಕೆ ಬೆಂಕಿ ಬಿದ್ದಿದ್ದು, ಶಾರ್ಟ್ ಸರ್ಕ್ಯೂಟ್ನಿಂದಾಗಿ ಬೆಂಕಿ ಹೊತ್ತಿ ಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಸ್ಥಳಕ್ಕೆ ಕೆಆರ್ಪುರಂ ಠಾಣಾ ಪೊಲೀಸರು, ಅಗ್ನಿ ಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದು, ಮನೆಯ ಮೇಲಿನ ಟವರ್ನಲ್ಲಿ ಬೆಂಕಿ ಹೊತ್ತಿ ಕೊಂಡಿದ್ದರಿಂದ ಆತಂಕಗೊಂಡು ಮನೆಯವರು ಕೆಲಕಾಲ ಹೊರಬಂದಿದ್ದರು. ಇನ್ನೂ ಘಟನೆಯಲ್ಲಿ ಯಾವುದೇ ಹಾನಿ ಸಂಭವಿಸಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಮೊಬೈಲ್ ಟವರ್ ನಿರ್ವಹಣೆ ಮಾಡುತ್ತಿದ್ದ ಸಂಸ್ಥೆಯ ನೌಕರರನ್ನು ವಿಚಾರಣೆಗೊ
Next Story