ನೋಟು ಬದಲಾವಣೆಗೆ ಸ್ವಯಂ ಸೇವಕರನ್ನು ನಿಯೋಜಿಸಲು ಸಾರ್ವಜನಿಕರ ಆಗ್ರಹ
ಬೆಂಗಳೂರು, ನ.11: ಹಳೆಯ ನೋಟುಗಳನ್ನು ಬದಲಿಸಿಕೊಳ್ಳಲು ಜನತೆ ಸಾಕಷ್ಟು ಸಮಸ್ಯೆಯನ್ನು ಎದುರಿಸುತ್ತಿದ್ದು, ಶನಿವಾರ ಹಾಗೂ ರವಿವಾರವೂ ಬ್ಯಾಂಕ್ಗಳು ತೆರೆದಿರುವುದರಿಂದ ಗ್ರಾಹಕರು ದಿನವಿಡೀ ನಿಂತಾದರು ಹೊಸ ನೋಟುಗಳನ್ನು ಪಡೆ ಯುವ ಉತ್ಸಾಹದಲ್ಲಿದ್ದಾರೆ.
ಕಳೆದ ಎರಡು ದಿನದಿಂದ ರಾಜ್ಯದೆಲ್ಲೆಡೆ ಬ್ಯಾಂಕ್ಗಳ ಮುಂದೆ ಜನತೆ ತಮ್ಮಲ್ಲಿರುವ ಹೊಸ ನೋಟುಗಳನ್ನು ಬದಲಿಸಿಕೊಳ್ಳಲು ಗಂಟೆ ಗಟ್ಟಲೆ ಸಾಲಿನಲ್ಲಿ ನಿಂತಿದ್ದರೂ ಸಹ ಹಲ ವರಿಗೆ ಹೊಸ ನೋಟುಗಳನ್ನು ಪಡೆಯಲು ಸಾಧ್ಯವಾಗಿಲ್ಲ. ಇನ್ನು ಕೆಲವರು ಗುರುವಾರ ಹಾಗೂ ಶುಕ್ರವಾರ ಕೆಲಸದ ದಿನವಾಗಿರುವುದರಿಂದ ಬ್ಯಾಂಕ್ನತ್ತ ಮುಖ ಮಾಡಿಲ್ಲ. ಹೀಗಾಗಿ ಶನಿವಾರ ಹಾಗೂ ರವಿವಾರ ಬ್ಯಾಂಕ್ಗಳಿಗೆ ಜನ ಹೆಚ್ಚಾಗುವ ಸಾಧ್ಯತೆಗಳಿವೆ.
ಸ್ವಯಂ ಸೇವಕರ ಅಗತ್ಯವಿದೆ: ನಗರದ ಕೆಲವು ಜನತೆಯನ್ನು ಹೊರತು ಪಡಿಸಿ ಹಲವರಿಗೆ ಬ್ಯಾಂಕ್ ವ್ಯವಹಾರ ಹಾಗೂ ನಿಯಮಗಳ ಕುರಿತು ಹೆಚ್ಚಿನ ಮಾಹಿತಿ ಇಲ್ಲವಾ ಗಿದೆ. ಹೀಗಾಗಿ ಹಲವು ಮಂದಿ ಸಾಲಿನಲ್ಲಿ ಗಂಟೆಗಟ್ಟಲೆ ನಿಂತೂ ಸೂಕ್ತ ದಾಖಲೆಗಳನ್ನು ತರದ ಕಾರಣ ತಮ್ಮ ಹಳೆಯ ನೋಟುಗಳನ್ನು ಬದಲಾಯಿಸಿಕೊಳ್ಳಲಾಗದೆ ಜೀತಿ ಪಟ್ಟಿರುವ ಪ್ರಕರಣಗಳು ನಡೆದಿವೆ. ಈ ಹಿನ್ನೆಲೆಯಲ್ಲಿ ಕೆಲವು ಸ್ವಯಂ ಸೇವಕರು ಅಗತ್ಯವಿದ್ದು, ಮಾಹಿತಿ ಯ ಕೊರತೆ ಇದ್ದವರಿಗೆ ಹಾಗೂ ವಯೋವೃದ್ಧರಿಗೆ ಸಹಾಯ ಮಾಡಲು ಸಹಾಯವಾ ಗುತ್ತದೆ. ಈ ಹಿನ್ನೆಲೆಯಲ್ಲಿ ನಗರದ ಕೆಲವು ಸಂಘ, ಸಂಸ್ಥೆಗಳು ಇಂತಹ ಕೆಲಸಕ್ಕೆ ಮುಂದಾದರೆ ಹೆಚ್ಚಿನ ಅನುಕೂಲವಾಗಲಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.ುಡಿಯುವ ನೀರು: ಬ್ಯಾಂಕ್ಗಳ ಮುಂದೆ ಮಹಿಳೆಯರು ಹಾಗೂ ವಯೋವೃದ್ಧರು ಗಂಟೆಗಟ್ಟಲೆ ನಿಂತು ಹೈರಾಣಾಗುತ್ತಿದ್ದಾರೆ. ಮಧುಮೇಹಿಗಳ ಸಂಖ್ಯೆಯು ಹೆಚ್ಚಿರುವುದರಿಂದ ಇಂತಹವರಿಗೆ ಕುಡಿಯುವ ನೀರು, ನೆರಳಿನ ವ್ಯವಸ್ಥೆ ಹಾಗೂ ವಿಶ್ರಾಂತಿ ಪಡೆ ಯಲು ಕುರ್ಚಿಯ ವ್ಯವಸ್ಥೆ ಮಾಡಿದರೆ ಅನುಕೂಲವಾಗಲಿದೆ ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.