ಅಪಪ್ರಚಾರದ ವಿರುದ್ಧ ದೂರು ನೀಡಿದ ಮಲೆಯಾಳಂ ಚಿತ್ರ ನಟ ದಿಲೀಪ್

ಕೊಚ್ಚಿ,ಫೆ. 24: ನಟಿಗೆ ಕಿರುಕುಳ ನೀಡಿದ ಪ್ರಕರಣದಲ್ಲಿ ತನ್ನ ವಿರುದ್ಧ ನಡೆಸಲಾದ ಅಪಪ್ರಚಾರಗಳ ವಿರುದ್ಧ ನಟ ದಿಲೀಪ್ ಡಿಜಿಪಿ ಲೋಕನಾಥ್ ಬೆಹ್ರಾರಿಗೆ ದೂರು ನೀಡಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ತನ್ನ ವಿರುದ್ಧ ಅಪಪ್ರಚಾರ ನಡೆಯುತ್ತಿದೆ ಎಂದು ದಿಲೀಪ್ ಹೇಳಿದ್ದಾರೆ. ನಟಿಯನ್ನು ಆಕ್ರಮಿಸಿದ ಘಟನೆಯಲ್ಲಿ ದಿಲೀಪ್ ಶಾಮೀಲಾಗಿದ್ದಾರೆಂದು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚಾರವಾಗಿತ್ತು. ಕೆಲವು ಆನ್ಲೈನ್ ಮಾಧ್ಯಮಗಳು ಘಟನೆಯನ್ನು ವರದಿ ಮಾಡಿದ್ದವು.
ಇದರ ಬೆನ್ನಿಗೆ ದಿಲೀಪ್ ಪೊಲೀಸರಿಗೆ ದೂರು ನೀಡಿದ್ದಾರೆಂದು ವರದಿತಿಳಿಸಿದೆ.
Next Story