ಮುಂಬೈನ ನೂತನ ಮೇಯರ್ ಆಗಿ ಶಿವಸೇನೆಯ ವಿಶ್ವನಾಥ ಮಹದೇಶ್ವರ
ಮುಂಬೈ, ಮಾ.8: ಏಷ್ಯಾದ ಅತ್ಯಂತ ಶ್ರೀಮಂತ ಮಹಾನಗರ ಪಾಲಿಕೆ ಎಂಬ ಹೆಗ್ಗಳಿಕೆ ಹೊಂದಿರುವ ಬೃಹನ್ಮುಂಬೈ ಮಹಾನಗರ ಪಾಲಿಕೆ(ಬಿಎಂಸಿ)ಯ ನೂತನ ಮೇಯರ್ ಆಗಿ ಶಿವಸೇನೆಯ ವಿಶ್ವನಾಥ ಮಹದೇಶ್ವರ ಅವರು ಬುಧವಾರ ಆಯ್ಕೆಯಾದರು. ಮಹದೇಶ್ವರ ಆಯ್ಕೆಯನ್ನು ಬಿಜೆಪಿ ಬೆಂಬಲಿಸಿತ್ತು.
ಚುನಾವಣೆಯಲ್ಲಿ ಶಿವಸೇನೆ(84) ಮತ್ತು ಬಿಜೆಪಿ(82) ಪ್ರತ್ಯೇಕವಾಗಿ ಸ್ಪರ್ಧಿಸಿದ್ದು, ಹೆಚ್ಚುಕಡಿಮೆ ಸಮಾನ ಸ್ಥಾನಗಳನ್ನು ಪಡೆದಿವೆ. ಮೇಯರ್ ಹುದ್ದೆಗೆ ಸ್ಪರ್ಧಿಸದಿರಲು ಬಿಜೆಪಿ ನಿರ್ಧರಿಸಿತ್ತು. ಹೀಗಾಗಿ ಮೇಯರ್ ಹುದ್ದೆ ಸುಲಭವಾಗಿ ಶಿವಸೇನೆ ಪಾಲಾಗಿದೆ.
ಮಹದೇಶ್ವರ ಆಯ್ಕೆಯಾಗುವಂತಾಗಲು ಬಿಜೆಪಿ ಮತದಾನದಿಂದ ದೂರವುಳಿಯ ಬಹುದಿತ್ತು. ಆದರೆ ಬಿಜೆಪಿ ಸದಸ್ಯರು ಶಿವಸೇನೆ ಸದಸ್ಯರೊಂದಿಗೆ ಕೈಗಳನ್ನೆತ್ತಿ ಮಹದೇಶ್ವರ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದು,ಇದು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಮಾಜಿ ಮಿತ್ರಪಕ್ಷದ ಮುಂದಿರಿಸಿರುವ ಸಂಧಾನ ಸಂಕೇತವಾಗಿದೆ ಎಂದು ಪರಿಗಣಿಸ ಲಾಗಿದೆ. ಫಡ್ನವೀಸ್ ಸರಕಾರವು ಬಹುಮತಕ್ಕಾಗಿ ಶಿವಸೇನೆಯನ್ನೇ ಆಧರಿಸಿದೆ.
Next Story