ಕೇರಳ ಡಿಜಿಪಿ ಸೇನ್ಕುಮಾರ್ ಮರು ನೇಮಕಕ್ಕೆ ಸುಪ್ರೀಂ ಆದೇಶ
ಹೊಸದಿಲ್ಲಿ, ಎ.24: ಉಚ್ಚಾಟಿತ ಕೇರಳ ಡಿಜಿಪಿ ಟಿ.ಪಿ.ಸೇನ್ಕುಮಾರ್ ಅವರನ್ನು ಮರು ನೇಮಿಸಿಕೊಳ್ಳುವಂತೆ ಕೇರಳ ಸರಕಾರಕ್ಕೆ ಸುಪ್ರೀಂಕೋರ್ಟ್ ಆದೇಶ ನೀಡಿದ್ದು, ಸುಪ್ರೀಂ ಕೋರ್ಟ್ನ ಇತಿಹಾಸದಲ್ಲೇ ಈ ರೀತಿಯ ಆದೇಶ ನೀಡಿದ ಮೊತ್ತಮೊದಲ ಪ್ರಕರಣ ಇದಾಗಿದೆ. ಸುಪ್ರೀಂಕೋರ್ಟ್ನ ವಿಭಾಗೀಯ ಪೀಠದ ನ್ಯಾಯಮೂರ್ತಿಗಳಾದ ಮದನ್ ಬಿ.ಲೋಕುರ್ ಮತ್ತು ದೀಪಕ್ ಗುಪ್ತ ಈ ಆದೇಶ ನೀಡಿದರು. ಅಧಿಕಾರದಲ್ಲಿರುವ ರಾಜಕಾರಣಿಗಳು ಪೊಲೀಸ್ ಅಧಿಕಾರಿಗಳನ್ನು ‘ಹರಕೆಯ ಕುರಿ’ಗಳನ್ನಾಗಿಸುವುದು ಸರಿಯಲ್ಲ ಎಂದು ಈ ಮೂಲಕ ಕೋರ್ಟ್ ಸ್ಪಷ್ಟವಾಗಿ ತಿಳಿಸಿದೆ. ಪ್ರಕರಣದ ವಾಸ್ತವಾಂಶ ಮತ್ತು ಸಂದರ್ಭವನ್ನು ಪರಿಶೀಲನೆ ನಡೆಸಲಾಗಿದ್ದು ಸೇನ್ಕುಮಾರ್ ಅವರನ್ನು ಅನುಚಿತವಾಗಿ ನಡೆಸಿಕೊಂಡಿರುವುದು ಸ್ಪಷ್ಟವಾಗಿದೆ. ಆದ್ದರಿಂದ ಸರಕಾರದ ನಿರ್ಧಾರವನ್ನು ರದ್ದುಗೊಳಿಸಿ ಅರ್ಜಿದಾರರನ್ನು ಮರು ನೇಮಕಗೊಳಿಸುವಂತೆ ಕೇರಳ ಸರಕಾರಕ್ಕೆ ಆದೇಶ ನೀಡಲಾಗಿದೆ ಎಂದು ಸುಪ್ರೀಂಕೋರ್ಟ್ ತಿಳಿಸಿದೆ.
Next Story