ಪ್ರೇಮಪಾಶದಲ್ಲಿ ಬಿದ್ದು ಕಲಿಕೆ ನಿರ್ಲಕ್ಷ್ಯಿಸಿದ ಪುತ್ರಿಯನ್ನು ಕೊಂದ ತಾಯಿ
ಬೆಂಗಳೂರು, ಜೂ.7: ತನ್ನ ಪುತ್ರಿ ಯುವಕನೊಬ್ಬನ ಪ್ರೇಮಪಾಶದಲ್ಲಿ ಬಿದ್ದು ಕಲಿಕೆಯನ್ನು ನಿರ್ಲಕ್ಷ್ಯಿಸುತ್ತಿದ್ದಾಳೆಂದು ತಿಳಿದು ಕೋಪಗೊಂಡ 45 ವರ್ಷದ ಮಹಿಳೆಯೊಬ್ಬಳು ಆಕೆಯನ್ನು ಹತ್ಯೆ ಮಾಡಿದ ಘಟನೆ ಕೋಲಾರ ಜಿಲ್ಲೆಯ ಚಿನ್ನಪುರ ಗ್ರಾಮದಿಂದ ವರದಿಯಾಗಿದೆ.
ಆರೋಪಿ ಮಹಿಳೆ ವೆಂಕಟಮ್ಮ ಕೃಷಿ ಕಾರ್ಮಿಕೆಯಾಗಿದ್ದು, ಆಕೆಯನ್ನು ಬಂಧಿಸಲಾಗಿದೆ. ಆಕೆ ತನ್ನ ಪುತ್ರಿ ರಾಜೇಶ್ವರಿಯನ್ನು ಕಬ್ಬಿಣದ ರಾಡ್ ಉಪಯೋಗಿಸಿ ಹತ್ಯೆ ಮಾಡಿದ್ದಳೆಂದು ತಿಳಿದು ಬಂದಿದೆ. ಆಕೆ ತಾನು ಮಾಡಿದ ಅಪರಾಧವನ್ನು ಒಪ್ಪಿಕೊಂಡಿದ್ದಾಳೆಂದು ಪೊಲೀಸರು ಹೇಳಿದ್ದಾರೆ.
ಆಕೆಯ ಪುತ್ರಿ ಅವರದೇ ಗ್ರಾಮದ ಯುವಕನೊಬ್ಬನೊಂದಿಗೆ ಪ್ರೇಮ ವ್ಯವಹಾರ ಹೊಂದಿದ್ದನ್ನು ತಿಳಿದಂದಿನಿಂದ ವೆಂಕಟಮ್ಮ ಪುತ್ರಿಯ ಮೇಲೆ ಕೋಪಗೊಂಡಿದ್ದು, ಆಕೆಯ ಕೋಪ ಪುತ್ರಿಯ ಕೊಲೆಯಲ್ಲಿ ಪರ್ಯವಸಾನಗೊಂಡಿದೆ. ಆಕೆಯ ಪುತ್ರಿ ಪರೀಕ್ಷೆಯಲ್ಲೂ ಅನುತ್ತೀರ್ಣಳಾಗಿದ್ದಳು ಎಂದು ತಿಳಿದು ಬಂದಿದೆ.
ಬಂಧಿತ ಮಹಿಳೆಯನ್ನು ಮಂಗಳವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಆಕೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
Next Story