Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ವಿಡಂಬನೆ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಭೀಮ ಚಿಂತನೆ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವೈವಿಧ್ಯ
  3. ಮಳೆಗಾಲ ಶುರುವಾಗಿದೆ - ಜೀವಜಲ...

ಮಳೆಗಾಲ ಶುರುವಾಗಿದೆ - ಜೀವಜಲ ಹಿಡಿದಿಟ್ಟುಕೊಳ್ಳುವ ಸುಸಮಯ

ಪ್ರಭಾಕರ ಟಿ.ಚೀಮಸಂದ್ರಪ್ರಭಾಕರ ಟಿ.ಚೀಮಸಂದ್ರ2 July 2017 6:24 PM GMT
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
share
ಮಳೆಗಾಲ ಶುರುವಾಗಿದೆ - ಜೀವಜಲ ಹಿಡಿದಿಟ್ಟುಕೊಳ್ಳುವ ಸುಸಮಯ

ಬೆಂಗಳೂರು ನಗರದಲ್ಲಿ ಪ್ರತಿ ವರ್ಷ ಕಾಡುತ್ತಿರುವ ನೀರಿನ ತತ್ವಾರವನ್ನು ನೀಗಿಸಲು ವ್ಯವಸ್ಥಿತ ಮಳೆ ನೀರಿನ ಕೊಯ್ಲಿನಿಂದ ಮಾತ್ರ ಸಾಧ್ಯ. ವರ್ಷವೊಂದರಲ್ಲಿ ಸುರಿಯುವ ಮಳೆ ನೀರನ್ನು ಶೇಖರಿಸಿದರೆ ಉದ್ಯಾನ ನಗರದಲ್ಲಿ ಒಟ್ಟು 15 ಟಿಎಂಸಿ ನೀರು ಹಿಡಿದಿಟ್ಟುಕೊಳ್ಳಬಹುದು.

ಬೆಂಗಳೂರಿನಲ್ಲಿ ವರ್ಷವೊಂದರಲ್ಲಿ ಸರಾಸರಿ ಒಂದು ಸಾವಿರ ಮಿ.ಲೀ. ಮಳೆಯಾಗುತ್ತದೆ. 30×40 ಅಳತೆಯ ಮನೆಯ ತಾರಸಿಯಿಂದ 1.10 ಲಕ್ಷ ಲೀಟರ್ ನೀರು ಸಂಗ್ರಹಿಸಬಹುದು. ಈ ಮೂಲಕ ನಗರದಲ್ಲಿರುವ ಜನರಿಗೆ ಬೇಕಿರುವ ಶೇ.75ರಷ್ಟು ನೀರು ಲಭ್ಯವಾಗಲಿದೆ ಎಂಬುದು ಜಲ ತಜ್ಞರ ಅಭಿಪ್ರಾಯ.

ಮನೆಗಳನ್ನು ನಿರ್ಮಿಸುವಾಗಲೇ ವ್ಯವಸ್ಥಿತವಾಗಿ ಮಳೆ ನೀರು ಕೊಯ್ಲು ತಂತ್ರಗಾರಿಕೆಯನ್ನು ಅಳವಡಿಸಿಕೊಂಡರೆ 4 ಜನರ ಒಂದು ಕುಟುಂಬ ನಿರ್ವಹಣೆಗೆ ಬೇಕಾಗಿರುವ ನೀರು ಸಿಗಲಿದೆ. ಅಲ್ಲದೆ ಮಳೆ ನೀರು ಸಂಗ್ರಹಣೆ ಹಾಗೂ ಇಂಗುಗುಂಡಿ ನಿರ್ಮಾಣದಿಂದ ಅಂತರ್ಜಲ ಮಟ್ಟವನ್ನು ಹೆಚ್ಚಿಸ ಬಹುದು.

ಮಳೆ ನೀರು ಸುಗ್ಗಿ ಕೇಂದ್ರದಿಂದ ತರಬೇತಿ

ಮಳೆ ನೀರು ಕೊಯ್ಲು ಅಳವಡಿಸಿಕೊಳ್ಳದ ಮನೆ ಮಾಲಕರಿಗೆ ದಂಡ ವಿಧಿಸುವ ಕ್ರಮ ಆರಂಭಿಸಿದ ಮೇಲೆ ಮಳೆ ನೀರು ಕೊಯ್ಲು ಅಳವಡಿಕೆಗೆ ಜನರು ಮುಂದಾಗಿದ್ದಾರೆ. ಮಳೆ ನೀರು ಸಂಗ್ರಹಕ್ಕಾಗಿ ತರಬೇತಿ ನೀಡಲು ಹಲವು ಕೇಂದ್ರಗಳಿವೆ. ಮಳೆ ನೀರು ಸಂಗ್ರಹ ಮತ್ತು ನೀರಿನ ಸದ್ಬಳಕೆ ಕುರಿತು ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ ಹಾಗೂ ಜಲಮಂಡಳಿ ಜಯನಗರದ 8ನೆ ಬ್ಲಾಕ್‌ನಲ್ಲಿ ಸರ್ ಎಂ.ವಿ.ವಿಶ್ವೇಶ್ವರಯ್ಯ ಮಳೆ ನೀರು ಸುಗ್ಗಿ ಕೇಂದ್ರ ಎಂಬ ಮಳೆ ನೀರು ಕೊಯ್ಲು ಥೀಮ್ ಪಾರ್ಕ್ ಸ್ಥಾಪಿಸಿ, ಮಳೆ ನೀರು ಕೊಯ್ಲು ಬಗ್ಗೆ ಮಾಹಿತಿ, ತರಬೇತಿಯನ್ನು ನೀಡಲಾಗುತ್ತಿದೆ.

35 ಸಾವಿರ ಮಂದಿ ಭೇಟಿ

2011ರಲ್ಲಿ ಸ್ಥಾಪಿತವಾದ ಮಳೆ ನೀರು ಸುಗ್ಗಿ ಕೇಂದ್ರ ದೇಶದ ಮೊದಲ ಮಳೆ ನೀರು ಸುಗ್ಗಿ ಕೇಂದ್ರವೆಂಬ ಹೆಗ್ಗಳಿಕೆಗೆ ಪಾತ್ರ ವಾಗಿದೆ. ಆರಂಭದಲ್ಲಿ ದಿನಕ್ಕೆ ಒಂದಿಬ್ಬರು ಭೇಟಿ ನೀಡುತ್ತಿದ್ದ ಈ ಕೇಂದ್ರಕ್ಕೆ ಇಂದು 15ರಿಂದ 20 ಜನ ಭೇಟಿ ನೀಡುತ್ತಿ ದ್ದಾರೆ. ಇದುವರೆಗೂ 35,500 ಮಂದಿ ಭೇಟಿ ನೀಡಿದ್ದಾರೆ. ಒಟ್ಟು 1,800 ಪ್ಲಂಬರ್‌ಗಳಿಗೆ ತರಬೇತಿ ನೀಡಲಾಗಿದೆ. 1.1 ಎಕರೆ ವಿಸ್ತೀರ್ಣದಲ್ಲಿ ಮರಳು ಹಾಸು, ಪಾಪ್‌ಅಪ್, ನೆಲದ ಮೇಲಿನ ತೊಟ್ಟಿ, ಭೂಗತ ತೊಟ್ಟಿ (ಸಂಪು), ಪ್ಲಾಸ್ಟಿಕ್ ಟ್ಯಾಂಕ್, ಮಧ್ಯಾಂತರ ಛಾವಣಿ ಸೇರಿದಂತೆ ಒಟ್ಟು 26 ಬಗೆಯ ಮಳೆ ಕೊಯ್ಲಿನ ಮಾದರಿಗಳನ್ನು ನಿರ್ಮಿಸಲಾಗಿದೆ.

ಕೇಂದ್ರದಲ್ಲಿ ಮಳೆಕೊಯ್ಲು, ನೀರಿನ ಉಳಿತಾಯದ ಬಗ್ಗೆ ಪ್ರಾತ್ಯಕ್ಷಿಕೆಗಳ ಮೂಲಕ ಮಾಹಿತಿ ನೀಡಲಾಗುತ್ತಿದೆ. ಮಳೆ ನೀರು ಸಂಗ್ರಹದ ಜೊತೆಗೆ ನೀರಿನ ಬಳಕೆಗೆ ಸಂಬಂಧಿಸಿದ ಹಲವು ಮಾಹಿತಿಗಳನ್ನು ಪ್ರಾತ್ಯಕ್ಷಿಕೆಗಳ ಮೂಲಕ ನೀಡಲಾಗುತ್ತಿದೆ.

ಮಳೆ ನೀರು ಸಂಗ್ರಹ ಪ್ರಾತ್ಯಕ್ಷಿಕೆ, ವ್ಯವಸ್ಥೆ ಅಳವಡಿಸಲು ಬೇಕಾಗುವ ಉಪಕರಣ ಸಲಕರಣೆಗಳು, ಜಲಮಂಡಳಿಯ ತಜ್ಞರ ಮಾರ್ಗದರ್ಶನ, ಪೈಪ್ ಲೈನ್ ಅಳವಡಿಕೆ ತಂತ್ರಜ್ಞರ ಮಾಹಿತಿ, ನೀರು ಸರಬರಾಜು ಕುರಿತ ಮಾಹಿತಿ ಪುಸ್ತಕಗಳು ಕೂಡ ಇಲ್ಲಿ ಲಭಿಸುತ್ತವೆ.

ಮಳೆ ನೀರು ಸಂಗ್ರಹ, ನೀರಿನ ಮಿತ ಬಳಕೆ, ತ್ಯಾಜ್ಯ ನೀರು ಬಳಕೆ ಕುರಿತು ಜನರಿಗೆ ಒಂದು ದಿನದ ತರಬೇತಿ ನೀಡಲಾಗುತ್ತಿದೆ. ಇದಕ್ಕಾಗಿ ಕೇಂದ್ರದಲ್ಲಿ 75 ಆಸನಗಳಿರುವ ಸುಸಜ್ಜಿತವಾದ ಒಳಾಂಗಣ ಸಭಾಂಗಣವನ್ನು ನಿರ್ಮಿಸಲಾಗಿದೆ.

ಸುಗ್ಗಿ ಕೇಂದ್ರದಲ್ಲಿ ತರಬೇತಿಯಿಂದ ಮಳೆ ನೀರು ಸಂಗ್ರ ಹಣೆಯ ತಂತ್ರಗಾರಿಕೆ ಫಲ ನೀಡಿದೆ. ಮನೆ ತಾರಸಿಯ ಮೇಲೆ ಸುರಿಯುವ ಮಳೆ ನೀರನ್ನು ಸಂಸ್ಕರಿಸಿ ಕುಡಿಯುವುದಕ್ಕೂ ಬಳಸಿಕೊಳ್ಳಲಾಗುತ್ತಿದೆ. ಕೊಗಡುನಲ್ಲಿರುವ ಸ್ವಂತ ತೋಟದಲ್ಲಿಯೂ ಮಳೆ ನೀರು ಕೊಯ್ಲು ಅಳವಡಿಸಿಕೊಂಡು ಸಮೃದ್ಧ ಕೃಷಿ ಮಾಡಲಾಗುತ್ತಿದೆ. ಈ ತಂತ್ರಗಾರಿಕೆಯನ್ನು ನೆರೆಹೊರೆ ಕೃಷಿಕರು ಅಳವಡಿಸಿಕೊಳ್ಳಲು ಉತ್ತೇಜನ ಸಿಕ್ಕಿದೆ ಎಂದು ನಗರದ ವಿಲ್ಸನ್ ಗಾರ್ಡ್‌ನ್ ನಿವಾಸಿ ಕೆ.ಎಂ.ಗಣಪತಿ ಅನುಭವ ಹಂಚಿಕೊಂಡರು.

ನಗರ ನಾಗರಿಕರು ಜೀವಜಲದ ಅಗತ್ಯ ಮತ್ತು ಪ್ರಾಮುಖ್ಯತೆಯನ್ನು ಅರಿಯಲು ಮಳೆನೀರು ಸುಗ್ಗಿ ಕೇಂದ್ರ ತರಬೇತಿ ನಡೆಸಲಾಗುತ್ತದೆ. ಆಸಕ್ತರು ಮಳೆ ನೀರು ಸುಗ್ಗಿ ಕೇಂದ್ರ, 8ನೆ ಮುಖ್ಯರಸ್ತೆ, 40ನೆ ಅಡ್ಡರಸ್ತೆ, 5ನೆ ಬ್ಲಾಕ್, ಜಯನಗರ. ದೂರವಾಣಿ ಸಂಖ್ಯೆ 080-26653666 ಸಂಪರ್ಕಿಸಬಹುದು.

7.10 ಕೋಟಿ ದಂಡ

ನಗರದಲ್ಲಿರುವ 1ಲಕ್ಷ 20 ಸಾವಿರ ಮನೆಗಳಲ್ಲಿ 2016ರ ಮೇ ತಿಂಗಳಿಂದ ಇದುವರೆಗೆ 72,200 ಮನೆಗಳಿಗೆ(40×60 ವಿಸ್ತೀರ್ಣದ ಒಳಗಿನ) ಮಳೆ ನೀರು ಕೊಯ್ಲು ಅಳವಡಿಸಲಾಗಿದೆ. ಮಳೆನೀರು ಕೊಯ್ಲು ಅಳವಡಿಸಿಕೊಳ್ಳದ ಮನೆ ಮಾಲಕರಿಂದ ಇದುವರೆಗೆ 7.10 ಕೋಟಿ ರೂ. ದಂಡ ವಸೂಲಿ ಮಾಡಲಾಗಿದೆ.

 ಮಂಜುನಾಥ್

ಮುಖ್ಯ ಅಭಿಯಂತರ ಜಲಮಂಡಳಿ

share
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
ಪ್ರಭಾಕರ ಟಿ.ಚೀಮಸಂದ್ರ
ಪ್ರಭಾಕರ ಟಿ.ಚೀಮಸಂದ್ರ
Next Story
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
X