ಆದಾಯ ತೆರಿಗೆ ಇ-ರಿಟರ್ನ್ಸ್ : ಹೊಸ ಹೆಲ್ಪ್ಲೈನ್ ನಂಬರ್ ಪ್ರಕಟ

ಹೊಸದಿಲ್ಲಿ, ಜ.1: ಇ-ಪಾವತಿ ವ್ಯವಸ್ಥೆಯ ಮೂಲಕ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ಹಾಗೂ ತೆರಿಗೆ ಸಂಬಂಧಿ ವ್ಯವಹಾರಗಳನ್ನು ಆನ್ಲೈನ್ ಮೂಲಕ ನಿರ್ವಹಿಸುವ ತೆರಿಗೆ ಪಾವತಿದಾರರಿಗೆ ಅನುಕೂಲವಾಗುವಂತೆ ಹೊಸ ಹೆಲ್ಪ್ಲೈನ್ ಸಂಖ್ಯೆಯನ್ನು ಆದಾಯತೆರಿಗೆ ಇಲಾಖೆ ಪ್ರಕಟಿಸಿದೆ.
ಇ-ಫೈಲಿಂಗ್ ಹೆಲ್ಪ್ಡೆಸ್ಕ್ ನಂಬರ್ ಬದಲಾಗಿದೆ. ಹೊಸ ನಂಬರ್ (ಇಂಡಿಯಾ ಟೋಲ್ಫ್ರೀ)18001030025. ನೇರ ನಂಬರ್ + 918046122000 ಆಗಿರುತ್ತದೆ ಎಂದು ಆದಾಯತೆರಿಗೆ ಇಲಾಖೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಇ-ಫೈಲಿಂಗ್ ಪೋರ್ಟಲ್ನಲ್ಲಿ ಯಾವುದೇ ಸಮಸ್ಯೆಯಾದಲ್ಲಿ ಹೊಸ ಹೆಲ್ಪ್ಲೈನ್ ಸಂಖ್ಯೆಗೆ ಕರೆ ಮಾಡಿ ತಿಳಿಸಬಹುದು ಎಂದು ಆದಾಯ ತೆರಿಗೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ತೆರಿಗೆದಾರರು ಇತರ ವಿಷಯಗಳ ಬಗ್ಗೆ ಮಾಹಿತಿ ಪಡೆಯಲು ಪ್ರತ್ಯೇಕ ಹೆಲ್ಪ್ಲೈನ್ ನಂಬರ್ ಇದೆ ಎಂದು ಅವರು ಹೇಳಿದ್ದಾರೆ.
Next Story