ಕಬ್ಬಿಣದ ರಾಡ್ನಿಂದ ಹೊಡೆದು 2 ಗಂಟೆಯೊಳಗೆ 6 ಜನರನ್ನು ಹತ್ಯೆಗೈದ ಮಾಜಿ ಸೈನಿಕ!

ಚಂಡೀಗಡ, ಜ.2: ಮಾನಸಿಕ ಅಸ್ವಸ್ಥ ವ್ಯಕ್ತಿಯೊಬ್ಬ ಎರಡು ಗಂಟೆಯೊಳಗೆ ಆರು ಜನರನ್ನು ಕಬ್ಬಿಣದ ರಾಡ್ನಿಂದ ಹೊಡೆದು ಹತ್ಯೆಗೈದ ದಾರುಣ ಘಟನೆ ನಡೆದಿದೆ.
ಮಂಗಳವಾರ ಬೆಳಗ್ಗೆ ಪೊಲೀಸ್ ಸ್ಟೇಶನ್ನಿಂದ 100 ಮೀ. ದೂರದಲ್ಲಿ ಈ ಘಟನೆ ನಡೆದಿದ್ದು, ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಇದನ್ನು ಆಧರಿಸಿ ಪೊಲೀಸರು ಹರ್ಯಾಣದ ಪಲ್ವಾಲ್ ನಗರದಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಮಾಜಿ ಸೈನಿಕ ನರೇಶ್ ಎಂದು ಗುರುತಿಸಲಾಗಿದೆ.
ನರೇಶ್ ಹುಚ್ಚಾಟಕ್ಕೆ ಬಲಿಯಾದ ಆರು ಜನರ ಪೈಕಿ ಓರ್ವ ಮಹಿಳೆ ಹಾಗೂ ಮೂವರು ವಾಚ್ಮ್ಯಾನ್ಗಳು ಸೇರಿದ್ದಾರೆ. ಕೃತ್ಯದ ಹಿಂದಿನ ಕಾರಣ ಏನೆಂದು ಇನ್ನೂ ಗೊತ್ತಾಗಿಲ್ಲ.
ವಿಡಿಯೋದಲ್ಲಿ ಮಾಜಿ ಸೈನಿಕ ನರೇಶ್ ರಾಡ್ ಹಿಡಿದುಕೊಂಡು ಓಡಾಡುತ್ತಿರುವ ದೃಶ್ಯವಿದೆ.
ಆರೋಪಿಗೆ ಸಣ್ಣಪುಟ್ಟ ಗಾಯವಾಗಿದ್ದು, ಆತನನ್ನು ಬಂಧಿಸಲು ಹೋಗಿದ್ದ ಪೊಲೀಸರ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದ.
Next Story