ಗೋವಾದಲ್ಲಿ ರನ್ವೇ ದಾಟಿ ಪತನಗೊಂಡ ಯುದ್ಧ ವಿಮಾನ: ಪೈಲಟ್ ಸುರಕ್ಷಿತ

ಪಣಜಿ, ಜ.3: ಮಿಗ್-29 ಭಾರತೀಯ ಯುದ್ದ ವಿಮಾನ ಗೋವಾ ವಿಮಾನ ನಿಲ್ದಾಣದಲ್ಲಿ ರನ್ವೇ ದಾಟಿ ಮುಂದೆ ಹೋಗಿ ಪತನಗೊಂಡಿದ್ದು, ಭಾರೀ ದುರಂತವೊಂದು ತಪ್ಪಿ ಹೋಗಿದೆ.
ರನ್ವೇ ತುದಿಯಲ್ಲಿ ಡಿಕ್ಕಿ ಹೊಡೆದ ವಿಮಾನಕ್ಕೆ ಏಕಾಏಕಿ ಬೆಂಕಿ ಹೊತ್ತಿಕೊಂಡಿದ್ದು, ಪೈಲಟ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
‘‘ಟ್ರೈನಿ ಪೈಲಟ್ನಿಂದ ಹಾರಾಡುತ್ತಿದ್ದ ಯುದ್ದ ವಿಮಾನ ಸ್ಕಿಡ್ ಆದ ಪರಿಣಾಮ ಈ ಅವಘಡ ಸಂಭವಿಸಿದೆ. ಗೋವಾ ಏರ್ಪೋರ್ಟ್ ಭಾರತೀಯ ನೌಕಾ ನೆಲೆ ಐಎಸ್ಎಸ್ ಹನ್ಸಾದಲ್ಲಿ ಕಾರ್ಯನಿರ್ವಹಿಸುತ್ತಿದೆ. ಬೆಂಕಿ ನಂದಿಸುವ ಕಾರ್ಯ ಮುಂದುವರಿಯುತ್ತಿರುವ ಹಿನ್ನೆಲೆಯಲ್ಲಿ ಗೋವಾ ಏರ್ಪೋರ್ಟ್ನಲ್ಲಿ ವಿಮಾನ ಹಾರಾಟ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
Next Story