ನರೇಂದ್ರ ಮೋದಿ 21ನೇ ಶತಮಾನದ ಶ್ರೇಷ್ಠ ನಟ: ಮೆವಾನಿ
.jpg)
ಹೊಸದಿಲ್ಲಿ, ಜ.4: 21ನೇ ಶತಮಾನದಲ್ಲಿ ವಿಶ್ವದ ಶ್ರೇಷ್ಠ ನಟ ಭಾರತದಲ್ಲಿ ಉದಯಿಸುತ್ತಾರೆ ಎಂದು ನಾಸ್ಟ್ರಡಮಸ್ ಭವಿಷ್ಯ ನುಡಿದಿದ್ದ ಎಂದು ಭಾರತದಲ್ಲಿ ದಲಿತರ ಸಮುದಾಯದ ಹಕ್ಕುಗಳ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮಾತನಾಡುತ್ತಿರುವ ವಿಡಿಯೋ ಜೊತೆ ಗುಜರಾತ್ ಶಾಸಕ ಜಿಗ್ನೇಶ್ ಮೆವಾನಿ ಟ್ವೀಟ್ ಮಾಡಿದ್ದಾರೆ.
‘‘ಮೋದಿ ಅವರು ದಲಿತರ ಮೇಲೆ ನಕಲಿ ಪ್ರೀತಿ ತೋರಿಸುತ್ತಿದ್ದಾರೆ. 21ನೇ ಶತಮಾನದಲ್ಲಿ ವಿಶ್ವ ಶ್ರೇಷ್ಠ ನಟ ಭಾರತದಲ್ಲಿ ಉದಯಿಸುತ್ತಾರೆಂದು ನಾಸ್ಟ್ರಡಮಸ್ ಭವಿಷ್ಯ ಈಗ ನಿಜವಾಗಿದೆ ’’ ಎಂದು ವ್ಯಂಗ್ಯವಾಡಿದ್ದಾರೆ.
ಮಹಾರಾಷ್ಟ್ರದಲ್ಲಿ ಇತ್ತೀಚೆಗೆ ದಲಿತ ಸಮುದಾಯದ ನಡೆಸಿದ ಪ್ರತಿಭಟನೆಯ ಹಿನ್ನೆಲೆಯಲ್ಲಿ ಮೆವಾನಿ ಟ್ವೀಟ್ ಮಾಡಿದ್ದಾರೆ.
Next Story