ಕೀನ್ಯದಿಂದ 3 ಭಾರತೀಯರು, 7 ನೇಪಾಳಿಗಳ ರಕ್ಷಣೆ: ಸ್ವರಾಜ್

ಹೊಸದಿಲ್ಲಿ, ಜ.4: ‘‘ಮಾನವ ಕಳ್ಳಸಾಗಣೆಯ ಜಾಲದ ಮೂಲಕ ಕೀನ್ಯಕ್ಕೆ ರವಾನೆಯಾಗಿದ್ದ ಭಾರತದ ಮೂವರು ಹಾಗೂ ನೇಪಾಳದ ಏಳು ಬಾಲಕಿಯರನ್ನು ಸರಕಾರ ರಕ್ಷಿಸಿದೆ. ಎಲ್ಲರನ್ನೂ ಅವರ ಮನೆಗೆ ಕಳುಹಿಸಿಕೊಡಲಾಗಿದೆ’’ ಎಂದು ವಿದೇಶಾಂಗ ವ್ಯವಹಾರ ಸಚಿವೆ ಸುಷ್ಮಾ ಸ್ವರಾಜ್ ಗುರುವಾರ ಲೋಕಸಭೆಯಲ್ಲಿ ತಿಳಿಸಿದ್ದಾರೆ.
‘‘ಸಚಿವಾಲಯ ಪಂಜಾಬ್ ಸರಕಾರದೊಂದಿಗೆ ವಿವರ ಹಂಚಿಕೊಂಡಿದ್ದು, ಏಜೆಂಟ್ ಹಾಗೂ ಈ ಕೃತ್ಯದಲ್ಲಿ ಭಾಗಿಯಾದವರ ವಿರುದ್ಧ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ’’ ಎಂದು ಸ್ವರಾಜ್ ಹೇಳಿದ್ದಾರೆ.
ಕೀನ್ಯದಲ್ಲಿರುವ ಭಾರತದ ರಾಯಭಾರಿ ಸುಚಿತ್ರಾ ದುರೈ ಹಾಗೂ ಪ್ರಥಮ ಕಾರ್ಯದರ್ಶಿ ಕರಣ್ ಯಾದವ್ ಬಾಲಕಿಯರ ರಕ್ಷಣೆಯಲ್ಲಿ ಮುತುವರ್ಜಿ ವಹಿಸಿದ್ದು ಅವರ ಕಾರ್ಯವನ್ನು ಸಚಿವಾಲಯ ಶ್ಲಾಘಿಸುತ್ತಿದೆ ಎಂದರು.
Next Story