ಮುಂಬೈಯಲ್ಲಿ ಮತ್ತೊಂದು ಅಗ್ನಿ ದುರಂತ

ಮುಂಬೈ, ಜ.5: ದಕ್ಷಿಣ ಮುಂಬೈಯ ನಾಗ್ಪಾಡ ಪ್ರದೇಶದ ವಸತಿ ಸಮುಚ್ಛಯದ ನೆಲಅಂತಸ್ತಿನಲ್ಲಿ ಶುಕ್ರವಾರ ಅಗ್ನಿ ದುರಂತ ಸಂಭವಿಸಿದೆ. ಅಗ್ನಿಶಾಮಕ ದಳದವರ ಸಕಾಲಿಕ ಕಾರ್ಯಾಚರಣೆಯಿಂದಾಗಿ ಹೆಚ್ಚಿನ ನಷ್ಟ ಉಂಟಾಗಿಲ್ಲ ಎಂದು ಮೂಲಗಳು ತಿಳಿಸಿವೆ.
7 ಅಂತಸ್ತುಗಳನ್ನು ಹೊಂದಿರುವ ಝಿಯಾ ಕಟ್ಟಡದಲ್ಲಿ ಶುಕ್ರವಾರ ಮಧ್ಯಾಹ್ನ 12:34ರ ವೇಳೆ ಅಗ್ನಿದುರಂತ ಸಂಭವಿಸಿದ್ದು ತಕ್ಷಣವೇ ಕಟ್ಟಡದ ನಿವಾಸಿಗಳನ್ನು ತೆರವುಗೊಳಿಸಿ ಬೆಂಕಿನಂದಿಸುವ ಕಾರ್ಯಾಚರಣೆ ನಡೆಸಲಾಯಿತು ಎಂದು ಅಗ್ನಿಶಾಮಕ ದಳದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮುಂಬೈಯಲ್ಲಿ ಕಳೆದ ಮೂರು ವಾರದಲ್ಲಿ ಸಂಭವಿಸಿದ ನಾಲ್ಕನೇ ಬೃಹತ್ ಅಗ್ನಿದುರಂತ ಇದಾಗಿದೆ.
Next Story