ಉಗ್ರರ ಬಾಂಬ್ ಸ್ಫೋಟಕ್ಕೆ ನಾಲ್ವರು ಪೊಲೀಸರು ಬಲಿ

ಶ್ರೀನಗರ, ಜ.6: ಜಮ್ಮು-ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಶನಿವಾರ ಉಗ್ರಗಾಮಿಗಳು ನಡೆಸಿರುವ ಬಾಂಬ್ ಸ್ಫೋಟದ ಕೃತ್ಯಕ್ಕೆ ನಾಲ್ವರು ಪೊಲೀಸರು ಹತರಾಗಿದ್ದು, ಓರ್ವನ ಸ್ಥಿತಿ ಗಂಭೀರವಾಗಿದೆ.
ಉಗ್ರರು ನಡೆಸಿರುವ ಐಇಡಿ ಸ್ಫೋಟಕ್ಕೆ ಬಲಿಯಾದ ನಾಲ್ವರಲ್ಲಿ ಮೂವರನ್ನು ಇರ್ಷಾದ್, ಎಂ.ಅಮಿನ್ ಹಾಗೂ ಗುಲಾಮ್ ನಬಿ ಎಂದು ಗುರುತಿಸಲಾಗಿದೆ. ಗಂಭೀರ ಗಾಯಗೊಂಡಿದ್ದ ಇನ್ನೋರ್ವ ಪೊಲೀಸ್ ಆಸ್ಪತ್ರೆ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾರೆ.
ನಾಲ್ವರು ಪೊಲೀಸರ ಹತ್ಯೆಗೆ ಮುಖ್ಯಮಂತ್ರಿ ಮೆಹಬೂಬ್ ಮುಫ್ತಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
‘‘ಸೋಪೊರ್ನಲ್ಲಿ ಐಇಡಿ ಸ್ಫೋಟಕ್ಕೆ ನಾಲ್ವರು ಪೊಲೀಸರು ಹತ್ಯೆಯಾಗಿರುವ ಸುದ್ದಿ ಕೇಳಿ ತುಂಬಾ ನೋವಾಗಿದೆ. ಮೃತ ಪೊಲೀಸ್ ಕುಟುಂಬ ಸದಸ್ಯರಿಗೆ ಸಾಂತ್ವಾನ ಹೇಳುವೆ’’ ಎಂದು ಮುಫ್ತಿ ಹೇಳಿದ್ದಾರೆ.
Next Story