ಕಲ್ಲಿದ್ದಲು ಗಣಿಯಲ್ಲಿ ಸಿಲುಕಿ ನಾಲ್ವರು ಸಾವು

ಭೋಪಾಲ್, ಜ. 7: ಬೇತುಲ್ ಜಿಲ್ಲೆಯಲ್ಲಿ ರವಿವಾರ ಕಲ್ಲಿದ್ದಲು ಗಣಿ ಕುಸಿದ ಪರಿಣಾಮ ಓರ್ವ ಬಾಲಕಿ ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ.
ಪಾಥಖೇಡದಲ್ಲಿರುವ ವೆಸ್ಟರ್ನ್ ಕೋಲ್ಪೀಲ್ಡ್ ಲಿಮಿಟೆಡ್ನ ಕಲ್ಲಿದ್ದಲು ಗಣಿಯಲ್ಲಿ ಅಕ್ರಮವಾಗಿ ಕಲ್ಲಿದ್ದಲು ಪ್ರತ್ಯೇಕಿಸುತ್ತಿದ್ದಾಗ ಗಣಿ ಕುಸಿದು ಕೆಲವು ಮಹಿಳೆಯರು ಮೃತಪಟ್ಟಿದ್ದಾರೆ ಎಂದು ಬೇತುಲ್ ಉಪವಲಯದ ದಂಡಾಧಿಕಾರಿ ಎಸ್.ಕೆ. ಭಂಡಾರಿ ತಿಳಿಸಿದ್ದಾರೆ.
ಅವಶೇಷಗಳ ಅಡಿ ಸಿಲುಕಿದ ಕೆಲವು ಮಹಿಳೆಯರನ್ನು ಪಥಾಖೇಡ ಹಾಗೂ ಸರಿನೀಯ ಪೊಲೀಸರು ಹಾಗೂ ಸ್ಥಳೀಯರು ಸೇರಿ ರಕ್ಷಿಸಿದ್ದಾರೆ. ಈ ಅವಶೇಷಗಳ ಅಡಿಯಲ್ಲಿ ಜನರು ಸಿಲುಕಿರುವ ಬಗ್ಗೆ ಶೋಧ ನಡೆಸಲಾಗುತ್ತಿದೆ.
ಘಟನೆಯಲ್ಲಿ ಮೃತಪಟ್ಟವರನ್ನು ಕಲಿಮಾಯಿ ಪ್ರದೇಶದ ಸೀಲು ಚೋರ್ಸೆ (45), ಮೀನಾ ಬೋರ್ಸೆ (35), ನಾನಿ ಬಾಯಿ (30), ಪಾಯಲ್ (11) ಎಂದು ಗುರುತಿಸಲಾಗಿದೆ.
Next Story