ಉರಿ ಸೆಕ್ಟರ್ ನಲ್ಲಿ ನಾಲ್ವರು ಉಗ್ರರ ಹತ್ಯೆ

ಶ್ರೀನಗರ, ಜ.15: ಜಮ್ಮು -ಕಾಶ್ಮೀರದ ಉರಿ ದುಲಾಂಜದಲ್ಲಿ ಒಳನುಸುಳುತ್ತಿದ್ದ ನಾಲ್ವರು ಉಗ್ರರನ್ನು ಜಮ್ಮು ಮತ್ತು ಕಾಶ್ಮೀರದ ಪೊಲೀಸರು, ಸೇನೆ, ಸಿಎಪಿಎಫ್ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಹೊಡೆದುರುಳಿಸಿದೆ.
ಜೈಶ್ ಉಗ್ರ ಸಂಘಟನೆಯ ಆತ್ಮಾಹುತಿ ದಳಕ್ಕೆ ಸೇರಿದೆನ್ನಲಾದ ನಾಲ್ವರು ಉಗ್ರರನ್ನು ಹೊಡೆದುರುಳಿಸಿದ್ದು, ಸೇನಾ ಕಾರ್ಯಾಚರಣೆ ಮುಂದುವರಿದಿದೆ ಎಂದು ತಿಳಿದು ಬಂದಿದೆ.
Next Story