ಮಾನನಷ್ಟ ಮೊಕದ್ದಮೆ: ವಿಚಾರಣೆಗೆ ಹಾಜರಾಗಲು ರಾಹುಲ್ ಗಾಂಧಿಗೆ ಭಿವಂಡಿ ನ್ಯಾಯಾಲಯ ಆದೇಶ

ಹೊಸದಿಲ್ಲಿ, ಜ.17: 'ಗಾಂಧಿಯನ್ನು ಕೊಂದಿದ್ದು ಆರ್ಎಸ್ಎಸ್' ಎಂಬ ಹೇಳಿಕೆ ನೀಡಿದ್ದಕ್ಕೆ ಮಾನನಷ್ಟ ಮೊಕದ್ದಮೆ ಎದುರಿಸುತ್ತಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಎ.23 ರಂದು ವಿಚಾರಣೆಗೆ ಹಾಜರಾಗುವಂತೆ ಭಿವಂಡಿ ನ್ಯಾಯಾಲಯ ಆದೇಶಿಸಿದೆ.
ರಾಹುಲ್ ಇಂದು ನ್ಯಾಯಾಲಯಕ್ಕೆ ಹಾಜರಾಗಬೇಕಾಗಿತ್ತು. ಆದರೆ, ಅವರು ಗೈರು ಹಾಜರಾಗಿದ್ದರು. ನ್ಯಾಯಾಲಯ ಅವರ ಹಾಜರಾತಿಗೆ ವಿನಾಯಿತಿ ನೀಡಿತ್ತು. ಅವರ ಬದಲಿಗೆ ವಕೀಲರು ಹಾಜರಾಗಿದ್ದರು.
ರಾಹುಲ್ 2014ರ ಮಾರ್ಚ್ನಲ್ಲಿ ಥಾಣೆಯಲ್ಲಿ ನಡೆದ ರ್ಯಾಲಿಯೊಂದರಲ್ಲಿ ಆರ್ಎಸ್ಎಸ್ ಹಾಗೂ ರಾಷ್ಟ್ರಪಿತ ಮಹಾತ್ಮ ಗಾಂಧಿ ಬಗ್ಗೆ ಹೇಳಿಕೆ ನೀಡಿದ್ದರು. ರಾಹುಲ್ ವಿರುದ್ಧ ಆರ್ಎಸ್ಎಸ್ ಕಾರ್ಯಕರ್ತನೊಬ್ಬ ಮೊಕದ್ದಮೆ ದಾಖಲಿಸಿದ್ದ.
‘‘ಗಾಂಧೀಜಿಯವರನ್ನು ಆರ್ಎಸ್ಎಸ್ ಜನರು ಹತ್ಯೆಗೈದಿದ್ದರು. ಅವರ ಜನರು(ಬಿಜೆಪಿ) ಈಗ ಗಾಂಧೀಜಿ ಬಗ್ಗೆ ಮಾತನಾಡುತ್ತಿದ್ದಾರೆ... ಇವರು ಸರ್ದಾರ್ ಪಟೇಲ್ ಹಾಗೂ ಗಾಂಧೀಜಿಯನ್ನು ವಿರೋಧಿಸುತ್ತಾರೆ’’ ಎಂದು ರಾಹುಲ್ ಹೇಳಿದ್ದರು.
Next Story