ಆರೆಸ್ಸೆಸ್ ನಿಯಂತ್ರಣದ ಆಡಳಿತದಲ್ಲಿ ತೊಗಾಡಿಯಾಗೂ ರಕ್ಷಣೆಯಿಲ್ಲ: ಪಿಣರಾಯಿ ವಿಜಯನ್
.jpg)
ಕಾಯಕ್ಕುಳಂ, ನ. 17: ಆರೆಸ್ಸೆಸ್ ನಿಯಂತ್ರಣದ ದೇಶದ ಆಡಳಿತದಲ್ಲಿ ವಿಶ್ವಹಿಂದೂ ಪರಿಷತ್ ನಾಯಕ ಕೂಡಾ ನಾಪತ್ತೆಯಾಗುವುದು ಆತಂಕಕಾರಿ ವಿಷಯ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಸಿಪಿಎಂ ಆಲಪ್ಪುಝ ಜಿಲ್ಲಾ ಸಮ್ಮೇಳನದ ಭಾಗವಾಗಿ ಸಾರ್ವಜನಿಕ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತಾಡುತ್ತಿದ್ದರು.
ದೇಶದಲ್ಲಿ ಅರಾಜಕತೆ ಹೆಚ್ಚುತ್ತಿದೆ. ಸಂಘ ಪರಿವಾರದ ತೊಗಾಡಿಯಾಗೂ ರಕ್ಷಣೆಯಿಲ್ಲದ ಸ್ಥಿತಿ ಇದೆ. ರಾಜ್ಯಗಳನ್ನು ದುರ್ಬಲಗೊಳಿಸುವುದು ಆರೆಸ್ಸೆಸ್ ತಂತ್ರವಾಗಿದೆ. ರಾಜ್ಯಗಳ ಅಭಿವೃದ್ಧಿ ಕಾರ್ಯಗಳನ್ನು ಚರ್ಚಿಸುತ್ತಿದ್ದ ಯೋಜನಾ ಆಯೋಗವನ್ನು ಇಲ್ಲದಾಗಿಸಿದ್ದು ಈ ತಂತ್ರದ ಭಾಗವಾಗಿದೆ. ಪಾರ್ಲಿಮೆಂಟರಿ ವ್ಯವಸ್ಥೆಯ ನಾಶಕ್ಕೆ ಕೂಡಾ ಪ್ರಯತ್ನ ನಡೆಯುತ್ತಿದೆ.
ಸಾಮ್ರಾಜ್ಯಶಾಹಿಗಳಿಗೆ ದೇಶವನ್ನು ಸಂಪೂರ್ಣ ಒತ್ತೆ ಇಡಲಾಗಿದೆ. ಆರ್ಥಿಕ ಪರಮಾಧಿಕಾರವನ್ನು ತೆಗೆದು ಹಾಕಿ ರಿಸರ್ವ್ ಬ್ಯಾಂಕನ್ನು ಮೂಕಪ್ರೇಕ್ಷಕನನ್ನಾಗಿಸುವ ಪ್ರಯತ್ನ ನಡೆಯುತ್ತಿದೆ.ದೇಶದ ಮೌಲ್ಯಗಳನ್ನು ನಾಶಪಡಿಸಲಾಗುತ್ತಿದೆ. ಜಾತ್ಯತೀತತೆ ನಾಶಪಡಿಸುವ ಆರೆಸ್ಸೆಸ್ ನೀತಿಯನ್ನು ಬಿಜೆಪಿ ಸಚಿವರು ಜಾರಿಗೊಳಿಸುತ್ತಿದ್ದಾರೆ ಎಂದು ಪಿಣರಾಯಿ ವಿಜಯನ್ ಹೇಳಿದ್ದಾರೆ.