ಪ್ರಾಚೀನ ಭಾರತೀಯ ನಾಗರಿಕತೆ ಬೆಳೆದುಬಂದಿರುವುದು ಪಾಕಿಸ್ತಾನದಲ್ಲಿ: ಮೋಹನ್ ಭಾಗ್ವತ್

ಹೊಸದಿಲ್ಲಿ, ಜ.22: ''ಪ್ರಾಚೀನ ಭಾರತೀಯ ನಾಗರಿಕತೆ ಬೆಳೆದುಬಂದ ಪಾಕಿಸ್ತಾನ ತನ್ನನ್ನು ಭಾರತ ಎಂದು ಕರೆದುಕೊಳ್ಳುತ್ತಿಲ್ಲ. ಏಕೆಂದರೆ ಇದರಲ್ಲಿ ಹಿಂದುತ್ವದ ಕಂಪು ಹೊರಸೂಸುತ್ತದೆ'' ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗ್ವತ್ ಹೇಳಿದ್ದಾರೆ.
"ಭಾರತ ಸುಸ್ಥಿರವಾಗಿಡಲು ವೈವಿಧ್ಯತೆಯೇ ಬಲವಾಗಿರುವ ಹಿಂದುತ್ವ ಇಂಧನವಾಗಿದೆ" ಎಂದು ಲೂತ್ಪೊರಿಯ ಹಿಂದೂ ಸಮ್ಮೇಳನದಲ್ಲಿ ಅವರು ಹೇಳಿದ್ದಾರೆ. ಬ್ರಹ್ಮಪುತ್ರಾ ನದಿದಂಡೆಯಲ್ಲಿ ವಾಸಿಸುವ ಹಿಂದೂಗಳ ಈ ಸಮ್ಮೇಳನ ಗುವಾಹತಿಯಲ್ಲಿ ನಡೆದಿದೆ.
"ಹಿಂದುತ್ವ ಇರುವವರೆಗೂ ಭಾರತ ಉಳಿಯುತ್ತದೆ. ಪ್ರಾಚೀನ ಭಾರತೀಯ ನಾಗರಿಕತೆ ಬೆಳೆದುಬಂದಿರುವುದು ಇಂದಿನ ಪಾಕಿಸ್ತಾನದಲ್ಲಿ. ಆದರೆ ಇದು ಭಾರತ ಎಂದು ಹೆಸರಿಕೊಳ್ಳದಿರಲು ಕಾರಣ ಈ ಪದ ಹಿಂದುತ್ವದ ಕಂಪು ಹೊಂದಿರುವುದು" ಎಂದು ಅವರು ಹೇಳಿದರು.
ಈಶಾನ್ಯ ಭಾಗರದ ಅತಿದೊಡ್ಡ ಸಮ್ಮೇಳನ ಎನಿಸಿಕೊಂಡಿರುವ ಈ ಸಮಾವೇಶ, ಮೂರು ಈಶಾನ್ಯ ರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ವಿಶೇಷ ಮಹತ್ವ ಪಡೆದಿದೆ. ತ್ರಿಪುರಾದಲ್ಲಿ ಫೆಬ್ರವರಿ 17 ಹಾಗೂ ಮೇಘಾಲಯ ಹಾಗೂ ನಾಗಾಲ್ಯಾಂಡ್ನಲ್ಲಿ ಫೆಬ್ರವರಿ 27ಕ್ಕೆ ಚುನಾವಣೆ ನಡೆಯಲಿದೆ.
ಭಾರತ, ಪಾಕಿಸ್ತಾನದ ಜತೆಗಿನ ದ್ವೇಷಭಾವನೆಯನ್ನು 1947ರ ಆಗಸ್ಟ್ 15ರಂದೇ ಮರೆತಿದೆ. ಆದರೆ ಪಾಕಿಸ್ತಾನ ಮರೆತಿಲ್ಲ. ಹಿಂದುತ್ವ ಎನ್ನುವುದು ಹಿಂದೂಯಿಸಂ ಅನ್ನು ಮೀರಿದ ಸಿದ್ಧಾಂತ ಎಂದು ಬಣ್ಣಿಸಿದರು.
"ಭಾರತವ ವೈಶಿಷ್ಟ್ಯ ಇರುವುದು ವೈವಿಧ್ಯತೆಯಲ್ಲಿ. ವೈವಿಧ್ಯತೆಯ ಹೊರತಾಗಿಯೀ ಭಾರತೀಯರಲ್ಲಿ ಒಗ್ಗಟ್ಟಿನ ಭಾವನೆ ಇದೆ. ಭಾರತೀಯ ಸಂಪ್ರದಾಯ ಎಲ್ಲರಿಗೆ, ಎಲ್ಲ ಸಮುದಾಯಕ್ಕೆ, ಎಲ್ಲ ಧರ್ಮಕ್ಕೂ ಒಂದೇ. ಜೀವನಮಾರ್ಗ ಮತ್ತು ನಡವಳಿಕೆಯ ಪಾಠವನ್ನು ಇಡೀ ವಿಶ್ವಕ್ಕೆ ಭಾರತ ಬೋಧಿಸಿದೆ. ವಿಶ್ವ ಹಿಂದುತ್ವ ಎಂದು ಪರಿಗಣಿಸುವುದು ಇದನ್ನು ಎಂದು ಅವರು ಹೇಳಿದ್ದಾರೆ.