ಗುಜರಾತ್ನಲ್ಲಿ ಗೋವು ಪ್ರವಾಸೋದ್ಯಮ !

ಅಹ್ಮದಾಬಾದ್,ಜ. 22: ಗುಜರಾತ್ನಲ್ಲಿ ಜಾನುವಾರುಗಳ ಸಾಕಾಣೆಯನ್ನು ಪ್ರೋತ್ಸಾಹಿಸಲು ಗೋವು ಪ್ರವಾಸೋದ್ಯಮವನ್ನು ರಾಜ್ಯದ ಗೋವಾ ಸೇವಾ ಆಯೋಗ ಆಯೋಜಿಸಲಿದೆ. ಗುಜರಾತ್ನ ಉತ್ತಮ ಗೋಸಾಕಣೆ ಕೇಂದ್ರಗಳಿಗೆ ಎರಡು ದಿವಸಗಳ ಪ್ರವಾಸ ಹಮ್ಮಿಕೊಳ್ಳಲಾಗುವುದು. ಗೋಮೂತ್ರ, ಸೆಗಣಿಯ ಉಪಯೋಗದಿಂದ ವಿವಿಧ ಉತ್ಪನ್ನಗಳನ್ನು ಪರಿಚಯಿಸುವುದು ಕೂಡಾ ಪ್ರವಾಸದ ಉದ್ದೇಶವಾಗಿದೆಯೆಂದು ಗುಜರಾತ್ ಗೋಸೇವಾ ಆಯೋಗ್ ಅಧ್ಯಕ್ಷ ವಲ್ಲಭ್ ಕಟಾರಿಯ ತಿಳಿಸಿದ್ದಾರೆ.
ಗೋಸಾಕಣೆಯ ಮೂಲಕ ಆದಾಯ ಗಳಿಸುವುದರ ಬಗ್ಗೆ ಹಲವರಿಗೆ ಗೊತ್ತಿಲ್ಲ. ಗೋಮೂತ್ರ,ಸೆಗಣಿ ಉಪಯೋಗಿಸಿ ಬಯೋಗ್ಯಾಸ್, ಮದ್ದುಗಳನ್ನು ತಯಾರಿಸಬಹುದು ಎಂದು ಕಟಾರಿಯಾ ಹೇಳಿದ್ದಾರೆ.
ಗೋವಿನ ಲಾಭ ಅರಿತುಕೊಂಡ ಹಲವಾರು ಪ್ರವಾಸಿಗರು ಗೋಸಾಕಣೆ ಆರಂಭಿಸಿದ್ದಾರೆ ಎಂದು ಕಟಾರಿಯ ಹೇಳಿದರು.
Next Story