ಗಣರಾಜ್ಯೋತ್ಸವದಲ್ಲಿ ಭಾವುಕರಾದ ರಾಷ್ಟ್ರಪತಿ ರಾಮನಾಥ್ ಕೋವಿಂದ್

ಹೊಸದಿಲ್ಲಿ, ಜ.26: ಶುಕ್ರವಾರ ಗಣರಾಜ್ಯೋತ್ಸವ ಸಮಾರಂಭದಲ್ಲಿ ವಾಯುಪಡೆಯ ಕಮಾಂಡೋ ಜ್ಯೋತಿ ಪ್ರಕಾಶ್ ನಿರಾಲ ಅವರಿಗೆ ಮರಣೋತ್ತರ ಅಶೋಕ ಚಕ್ರ ಪ್ರಶಸ್ತಿ ಪ್ರದಾನ ಮಾಡುವ ಸಂದರ್ಭ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭಾವುಕರಾಗಿದ್ದಾರೆ.
ನವೆಂಬರ್ ತಿಂಗಳಲ್ಲಿ ಜಮ್ಮು ಕಾಶ್ಮೀರದ ಬಂಡಿಪೊರ ಜಿಲ್ಲೆಯಲ್ಲಿ ಇಬ್ಬರು ಉಗ್ರರನ್ನು ಹೊಡೆದುರುಳಿಸುವ ಸಂದರ್ಭ ವಾಯುಪಡೆಯ ಕಮಾಂಡೋ ಜ್ಯೋತಿ ಪ್ರಕಾಶ್ ನಿರಾಲ ಹುತಾತ್ಮರಾಗಿದ್ದರು. ಪ್ರಶಸ್ತಿಯನ್ನು ಅವರ ಪತ್ನಿ ಸುಶ್ಮಾನಂದ್ ಹಾಗೂ ತಾಯಿ ಮಾಲತಿ ದೇವಿ ಸ್ವೀಕರಿಸಿದರು. ಅವರಿಗೆ ಪ್ರಶಸ್ತಿ ಪ್ರದಾನಿಸಿದ ನಂತರ ರಾಷ್ಟ್ರಪತಿ ಭಾವುಕರಾದರು.
ಭಾರತೀಯ ವಾಯುಪಡೆಯ ಗರುಡ್ ವಿಶೇಷ ಪಡೆಯ ಭಾಗವಾಗಿದ್ದ ನಿರಾಲ ಅವರು ನವೆಂಬರ್ 18ರಂದು ಬಂಡಿಪೊರದ ಚಂದೇರಘರ್ ಗ್ರಾಮದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಹುತಾತ್ಮರಾಗಿದ್ದರು. ಮನೆಯೊಂದರಲ್ಲಿ ಅಡಗಿದ್ದ ಉಗ್ರರ ವಿರುದ್ಧದ ಕಾರ್ಯಾಚರಣೆಯ ವೇಳೆ ನಿರಾಲ ಅವರ ಮೇಲೆ ಉಗ್ರರು ಗುಂಡಿನ ಮಳೆಗರೆದ ಹೊರತಾಗಿಯೂ ಅವರು ಧೈರ್ಯದಿಂದ ಕೊನೆ ಉಸಿರಿರುವ ತನಕವೂ ಹೋರಾಡಿದ್ದರು.
Next Story