ಉತ್ತರ ಪ್ರದೇಶದಲ್ಲಿ ಗುಂಪು ಘರ್ಷಣೆಗೆ ಒಬ್ಬ ಬಲಿ

ಆಗ್ರಾ, ಜ.26: ಇಲ್ಲಿನ ಕಾಸ್ಗಂಜ್ ನಲ್ಲಿ ಎರಡು ಗುಂಪುಗಳ ನಡುವೆ ನಡೆದ ಘರ್ಷಣೆಯಲ್ಲಿ ಓರ್ವ ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ.
ರ್ಯಾಲಿಯೊಂದರಲ್ಲಿ ಸಾಗುತ್ತಿದ್ದ ಗುಂಪೊಂದು ಇನ್ನೊಂದು ಗುಂಪನ್ನು ಗುರಿಯಾಗಿಸಿ ಘೋಷಣೆಗಳನ್ನು ಕೂಗಿತ್ತು. ತದನಂತರ ರ್ಯಾಲಿಯ ಮೇಲೆ ಕಲ್ಲು ತೂರಾಟ ನಡೆದಿತ್ತು ಎನ್ನಲಾಗಿದೆ.
“ಸ್ಥಳೀಯ ಯುವಕರಿಂದ ಮೋಟಾರ್ ಬೈಕ್ ಗಳಲ್ಲಿ ಅನಿರೀಕ್ಷಿತ ರ್ಯಾಲಿ ನಡೆಯಿತು. ಇಲ್ಲಿ ಎಲ್ಲಾ ಧರ್ಮದವರೂ ಇರುವ ಪ್ರದೇಶದಲ್ಲಿ ಹಾದುಹೋಗುವಾಗ ಈ ಯುವಕರು ಸ್ಥಳೀಯ ನಿವಾಸಿಗಳೊಂದಿಗೆ ಯಾವುದೋ ಕಾರಣಕ್ಕೆ ವಾಗ್ವಾದ ನಡೆಸಿದರು. ಈ ಸಂದರ್ಭ ಕಲ್ಲುತೂರಾಟ ನಡೆಯಿತು. ಘಟನೆಯಿಂದ ಒಬ್ಬರು ಮೃತಪಟ್ಟಿರುವುದು ದೃಢಪಟ್ಟಿದೆ” ಎಂದು ಪೊಲೀಸ್ ಅಧಿಕಾರಿ ಸಂಜೀವ್ ಗುಪ್ತಾ ಹೇಳಿದ್ದಾರೆ.
Next Story