ಗುವಾಹತಿಯಲ್ಲಿ ಮೂರು ಪ್ರತ್ಯೇಕ ಸ್ಫೋಟ
.jpg)
ಸಾಂದರ್ಭಿಕ ಚಿತ್ರ
ಟಿನ್ಸುಕಿಯಾ/ಗುವಾಹತಿ, ಜ. 26: ಗಣರಾಜ್ಯೋತ್ಸವದ ದಿನವಾದ ಶುಕ್ರವಾರ ಅಸ್ಸಾಂನ ಟಿನ್ಸುಕಿಯಾ ಜಿಲ್ಲೆಯಲ್ಲಿ ಮೂರು ಕಡಿಮೆ ತೀವ್ರತೆಯ ಸ್ಫೋಟ ಸಂಭವಿಸಿದೆ. ಉಲ್ಫಾ (ಸ್ವತಂತ್ರ) ಉಗ್ರರು ಈ ಸ್ಫೋಟ ನಡೆಸಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಫೋಟದಿಂದ ಯಾವುದೇ ಗಾಯಗಳಾದ ಬಗ್ಗೆ ವರದಿಯಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಜಾಗೌನ್ ಪೊಲೀಸ್ ಠಾಣಾ ಸಮೀಪ ಚರಂಡಿಯಲ್ಲಿ ಕೆಲವು ನಿಮಿಷಗಳ ಅಂತರದಲ್ಲಿ ಎರಡು ಸ್ಫೋಟ ಸಂಭವಿಸಿತು. ಲಿಡೋ ಪೊಲೀಸ್ ಠಾಣೆ ಸಮೀಪದ ಟಿರಾಪ್ ಕೋಲಿಯರಿಯ ಸಮೀಪ ಇನ್ನೊಂದು ಸ್ಫೋಟ ಸಂಭವಿಸಿತು ಎಂದು ಅವರು ತಿಳಿಸಿದ್ದಾರೆ.
ಉಲ್ಫಾ (ಸ್ವತಂತ್ರ)ಉಗ್ರರು ತಮ್ಮ ಅಸ್ತಿತ್ವ ತೋರಿಸಿಕೊಳ್ಳಲು ಈ ಕಡಿಮೆ ತೀವ್ರತೆಯ ಸ್ಫೋಟ ನಡೆಸಿದ್ದಾರೆ ಎಂದು ಜಿಡಿಪಿ ಮುಖೇಶ್ ಸಹಾಯ್ ಹೇಳಿದ್ದಾರೆ. ಈ ಬಗ್ಗೆ ತನಿಖೆ ಮುಂದುವರಿದಿದೆ. ಭದ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story