14 ಎಸ್ಎಸ್ಬಿ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ

ಹೊಸದಿಲ್ಲಿ, ಜ. 26: ಇಂದು ನಡೆದ ಗಣರಾಜ್ಯೋತ್ಸವದಲ್ಲಿ ಗಡಿ ಭದ್ರತಾ ಪಡೆ ಶಸಸ್ತ್ರ ಸೀಮಾ ಬಲ (ಎಸ್ಎಸ್ಬಿ)ದ 14 ಅಧಿಕಾರಿಗಳಿಗೆ ರಾಷ್ಟ್ರಪತಿ ಅವರ ಪೊಲೀಸ್ ಪದಕ ನೀಡಿ ಗೌರವಿಸಲಾಯಿತು.
ಪದಕ ಸ್ವೀಕರಿಸಿದವರಲ್ಲಿ ಪಡೆಯಲ್ಲಿ ಹೆಚ್ಚು ಜನಪ್ರಿಯರಾಗಿರುವ ಉಪ ನಿರ್ದೇಶಕ ಕೆ.ಎಂ. ಕಾರ್ಯಪ್ಪ ಕೂಡ ಸೇರಿದ್ದಾರೆ.
ಪ್ರಚಾರ, ಗ್ರಹಿಕೆ ಹಾಗೂ ಗಡಿ ನಿರ್ವಹಣೆ ಕ್ಷೇತ್ರದಲ್ಲಿ ಅಸಾಧಾರಣ ಸೇವೆ ಸಲ್ಲಿಸಿರುವುದಕ್ಕೆ 1989ರಲ್ಲಿ ಎಸ್ಎಸ್ಬಿ ಸೇರಿದ ಕಾರ್ಯಪ್ಪ ಅವರಿಗೆ ಈ ಪದಕ ನೀಡಿ ಗೌರವಿಸಲಾಗಿದೆ. 80 ಸಾವಿರ ಸಿಬ್ಬಂದಿ ಹೊಂದಿರುವ ಎಸ್ಎಸ್ಬಿ ಗೃಹ ಸಚಿವಾಲಯದ ಆದೇಶದಂತೆ ಕೆಲಸ ಮಾಡುತ್ತದೆ.
Next Story