ಮುಂಬೈ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅನಾಹುತ: 25 ಅಂಗಡಿಗಳು ಸುಟ್ಟು ಭಸ್ಮ

ಮುಂಬೈ, ಜ.27:ಮುಂಬೈ ಪಶ್ಚಿಮ ಉಪನಗರ ಗೋರೆಗಾಂವ್ನ ಕಾಮಾ ಕೈಗಾರಿಕಾ ಪ್ರದೇಶದಲ್ಲಿ ಶನಿವಾರ ಬೆಳಗ್ಗೆ ಸಂಭವಿಸಿದ ಅಗ್ನಿ ಅನಾಹುತಕ್ಕೆ ಸುಮಾರು 25 ಸಣ್ಣ-ಪುಟ್ಟ ಅಂಗಡಿಗಳು ಆಹುತಿಯಾಗಿವೆ. ಸಾವು-ನೋವಾಗಿರುವ ಕುರಿತು ವರದಿಯಾಗಿಲ್ಲ.
ಶನಿವಾರ ಬೆಳಗ್ಗೆ 8ರ ಸುಮಾರಿಗೆ ಎರಡು ಮಾಳಿಗೆಯ ಕಟ್ಟಡದ ತಳ ಮಾಳಿಗೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ಅಗ್ನಿಶಾಮಕ ದಳ ಘಟನಾ ಸ್ಥಳಕ್ಕೆ ಐದು ಇಂಜಿನ್ಗಳನ್ನು ಕಳುಹಿಸಿಕೊಟ್ಟಿದೆ. ಬೆಳಗ್ಗೆ ಘಟನೆ ನಡೆದ ಕಾರಣ ಕಟ್ಟಡದಲ್ಲಿ ಯಾರೂ ಇರಲಿಲ್ಲ. ಆರಂಭದಲ್ಲಿ ಚಿಕ್ಕದಾಗಿದ್ದ ಬೆಂಕಿ ಆನಂತರ ಕಟ್ಟಡವನ್ನು ವ್ಯಾಪಿಸಿದೆ. ಬೆಂಕಿಯನ್ನು ನಂದಿಸಲು ಒಂದು ಗಂಟೆ ತಗಲಿದೆ ಎಂದು ಅಗ್ನಿ ಶಾಮಕ ದಳದ ಮುಖ್ಯ ಅಧಿಕಾರಿ ರಹಾನ್ದಾಲೆ ಹೇಳಿದ್ದಾರೆ.
ಶಾರ್ಟ್ಸರ್ಕ್ಯೂಟ್ನಿಂದ ಬೆಂಕಿ ಹತ್ತಿಕೊಂಡಿದೆ ಎಂದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ.
Next Story