ಭಾರತದಲ್ಲಿ 21 ದಶಲಕ್ಷ ‘ಅನಪೇಕ್ಷಿತ ಹೆಣ್ಣುಮಕ್ಕಳು’!

ಹೊಸದಿಲ್ಲಿ, ಜ. 29: ಹಣಕಾಸು ಸಚಿವ ಅರುಣ್ ಜೇಟ್ಲಿ ಸೋಮವಾರ ಸಂಸತ್ತಿನಲ್ಲಿ ಮಂಡಿಸಿದ ಗುಲಾಬಿ ಬಣ್ಣದ ಆರ್ಥಿಕ ಸರ್ವೇ ದಾಖಲೆಗಳು ಸಮಾಜದಲ್ಲಿ ಗಂಡು ಮಗುವಿಗೆ ಆದ್ಯತೆ ನೀಡುವುದನ್ನು ಕಡಿಮೆ ಮಾಡಬೇಕು ಎಂದು ಪ್ರತಿಪಾದಿಸಿದೆ.
ಗಂಡು ಮಕ್ಕಳಿಗೆ ಆದ್ಯತೆ ನೀಡುವ ವಿದ್ಯಮಾನದಿಂದ ಅಂದಾಜು 21 ದಶಲಕ್ಷಕ್ಕೂ ಹೆಚ್ಚು ‘ಅನಪೇಕ್ಷಿತ ಹೆಣ್ಣು ಮಕ್ಕಳ ರಾಷ್ಟ್ರೀಯ ವಿಭಾಗ’ದಲ್ಲಿ ಸೇರಲು ಸಹಜವಾಗಿ ಕಾರಣವಾಗುತ್ತಿದೆ ಎಂದು ಸಮೀಕ್ಷೆ ಹೇಳಿದೆ.
ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ ಈ ವರ್ಷದ ಸರ್ವೇಯ ಬಣ್ಣವನ್ನಾಗಿ ಗುಲಾಬಿ ಅನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇದು ಖಂಡಾಂತರದಲ್ಲಿ ವ್ಯಾಪಿಸಿರುವ ಮಹಿಳೆಯರ ಮೇಲೆ ನಡೆಯುತ್ತಿರುವ ಹಿಂಸಾಚಾರದ ವಿರುದ್ಧ ಚಳವಳಿಯ ಬೆಳವಣಿಗೆಗೆ ಬೆಂಬಲದ ಸಂಕೇತ.
ಸಾಕಷ್ಟು ಸಂಖ್ಯೆಯ ಗಂಡು ಮಕ್ಕಳನ್ನು ಪಡೆಯುವ ವರೆಗೆ ಸಂತಾನ ಹೊಂದುವುದನ್ನು ಮುಂದುವರಿಸುವ ಹೆತ್ತವರು ಗಂಡು ಮಕ್ಕಳಿಗೆ ಆದ್ಯತೆ ನೀಡುವ ವಿದ್ಯಮಾನದ ಬಗ್ಗೆ ಈ ಸಮೀಕ್ಷೆ ಬೆಳಕು ಚೆಲ್ಲುತ್ತದೆ.
Next Story