ತನ್ನ ಪಕ್ಷದಲ್ಲಿ ದಲಿತರಿಗೆ ವಿಶೇಷ ಪ್ರಾಧಾನ್ಯತೆ ನೀಡಲು ರಜಿನಿ ಸೂಚನೆ

ಚೆನ್ನೈ,ಜ.30: ರಾಜಕೀಯ ಪ್ರವೇಶಿಸಿದ ಸೂಪರ್ಸ್ಟಾರ್ ರಜಿನೀಕಾಂತ್ ತನ್ನ ಪಕ್ಷದ ಪದಾಧಿಕಾರಿಗಳನ್ನು ನೇಮಿಸುವಾಗ ದಲಿತ ಸಮುದಾಯಕ್ಕೆ ವಿಶೇಷ ಪ್ರಾಧಾನ್ಯತೆ ನೀಡಬೇಕೆಂದು ಸೂಚಿಸಿದ್ದಾರೆ. ದಮನಿತರು, ದಲಿತ-ಅಲ್ಪಸಂಖ್ಯಾತ ವಿಭಾಗಗಳು, ಮಹಿಳೆಯರು, ಯುವಕರಿಗೆ ಜಿಲ್ಲಾ ಮಟ್ಟದಲ್ಲಿ ಸಂಘಟನೆಯ ಪ್ರಧಾನ ಹೊಣೆಗಾರಿಕೆ ನೀಡಬೇಕೆಂದು ಅವರು ಸೂಚಿಸಿದ್ದಾರೆ. ರಜನಿ ಮಕ್ಕಳ್ ಮಂಡ್ರಮ್ ನ ಹೆಸರಿನಲ್ಲಿ ಕಾರ್ಯಕರ್ತರನ್ನು ಸಂಘಟಿಸುವ ಕೆಲಸ ನಡೆಯುತ್ತಿದೆ. ಇದಕ್ಕಾಗಿ ವೆಬ್ಸೈಟ್ ಆರಂಭಿಸಲಾಗಿದೆ.
ರಾಜ್ಯದಲ್ಲಿ ಮೊದಲ ಬಾರಿ ರಜಿನಿ ಮಕ್ಕಳ ಮಂಡ್ರಮ್ ನ ಮಹಿಳಾ ವಿಭಾಗದ ಪದಾಧಿಕಾರಿಗಳು ಆಯ್ಕೆಯಾದ ವೆಲ್ಲೂರ್ ಜಿಲ್ಲೆಯಲ್ಲಿ ದಲಿತರು, ಮುಸ್ಲಿಮರು .ಪರಿಶಿಷ್ಟ ಜಾತಿಯವರು ಕೂಡಾ ಪಟ್ಟಿಯಲ್ಲಿದ್ದಾರೆ. ಡಿಎಂಕೆ, ಅಣ್ಣಾಡಿಎಂಕೆ ಮೊದಲಾದ ದ್ರಾವಿಡ ಪಾರ್ಟಿಗಳಲ್ಲಿ ರಾಜ್ಯದಲ್ಲಿ ಪ್ರಬಲರಾದ ತೇವರ್, ಕೌಂಡರ್, ವಣ್ಣಿಯಾರ್, ನಾಡಾರ್ ವಿಭಾಗ ಮೇಲುಗೈಯನ್ನು ಹೊಂದಿದೆ. ದಲಿತ- ಅಲ್ಪಸಂಖ್ಯಾತ ವಿಭಾಗಗಳ ನಾಯಕರು ಮುಖ್ಯ ಸ್ಥಾನದಲ್ಲಿ ಬಹಳ ಕಡಿಮೆ ಇದ್ದಾರೆ. ಅಣ್ಣಾಡಿಎಂಕೆಗೆ ಹೋಲಿಸಿದರೆ ಡಿಎಂಕೆಯಲ್ಲಿ ಸ್ವಲ್ಪವಾದರೂ ದಲಿತ,ಅಲ್ಪಸಂಖ್ಯಾತ ನಾಯಕರಿದ್ದಾರೆ.
ತಿರುವಾವಳವನ್ರ ವಿಡುದಲೈ ಚಿರುತೈಗಳ್ ಪಾರ್ಟಿದಲಿತರ ಪಾರ್ಟಿಯಾದರೂ ಅದಕ್ಕೆ ಕೆಲವು ವಿಭಾಗಗಳೆಡೆಯಲ್ಲಿ ಮಾತ್ರ ಪ್ರಭಾವವಿದೆ.