ಮಂಜು ವಾರಿಯರ್ ಹೊಸ ಸಿನೆಮಾ ನಿಷೇಧಕ್ಕೆ ಕೋರಿ ಕೇರಳ ಹೈಕೋರ್ಟ್ ಗೆ ಅರ್ಜಿ
‘ಲವ್ ಜಿಹಾದ್’ ಸಮರ್ಥಿಸುತ್ತದೆ ಎಂಬ ಆರೋಪ

ತಿರುವನಂತಪುರಂ, ಜ.31: ಲವ್ ಜಿಹಾದನ್ನು ಸಮರ್ಥಿಸುತ್ತದೆ ಎಂದು ಆರೋಪಿಪಿಸಿ ಮಂಜು ವಾರಿಯರ್ ನಟನೆಯ ನೂತನ ಚಲನಚಿತ್ರ ‘ಆಮಿ’ಗೆ ನಿಷೇಧ ಹೇರಬೇಕೆಂದು ಕೋರಿ ಕೇರಳ ಹೈಕೋರ್ಟ್ ನಲ್ಲಿ ಅರ್ಜಿಯೊಂದು ಸಲ್ಲಿಕೆಯಾಗಿದೆ.
ಪ್ರಸಿದ್ಧ ಬರಹಗಾರ್ತಿ ಮಾಧವಿ ಕುಟ್ಟಿ(ಕಮಲಾ ದಾಸ್) ಯವರ ಆತ್ಮಚರಿತ್ರೆ ಇದಾಗಿದ್ದು, ಕಮಲ್ ಚಿತ್ರ ನಿರ್ದೇಶಿಸಿದ್ದಾರೆ.
ಚಿತ್ರಕ್ಕೆ ಪ್ರಮಾಣಪತ್ರ ನೀಡಬಾರದು ಎಂದು ಸಿಬಿಎಫ್ ಸಿಗೆ ಆದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ. ಕಮಲಾ ದಾಸ್ ತ ಜೀವನದ ಘಟನೆಗಳನ್ನು ಚಿತ್ರದಲ್ಲಿ ಸರಿಯಾಗಿ ತೋರಿಸಲಾಗಿದೆಯೇ ಎಂದು ಸಿಬಿಎಫ್ ಸಿ ವಿಶ್ಲೇಷಿಸಬೇಕು ಎಂದೂ ಅರ್ಜಿಯಲ್ಲಿ ತಿಳಿಸಲಾಗಿದೆ.
“ಮಾಧವಿಕುಟ್ಟಿಯವರ ಇಸ್ಲಾಂಗೆ ಮತಾಂತರವಾಗಿರುವುದು ಕೇರಳದಲ್ಲಿ ‘ಲವ್ ಜಿಹಾದ್’ನ ಆರಂಭವಾಗಿದೆ” ಎಂದೂ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
Next Story