ಕೇಂದ್ರ ಬಜೆಟ್ ಗೆ ಸಚಿವ ಸಂಪುಟದ ಅಂಗೀಕಾರ

ಹೊಸದಿಲ್ಲಿ, ಫೆ.1: ಸಂಸತ್ ನಲ್ಲಿ ಕೆಲವೇ ಹೊತ್ತಿನಲ್ಲಿ ಮಂಡನೆಯಾಗಲಿರುವ ಕೇಂದ್ರ ಸರಕಾರದ 2018-19ನೇ ಸಾಲಿನ ಸಾಮಾನ್ಯ ಬಜೆಟ್ ಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಬಜೆಟ್ ನ್ನು ಅಂಗೀಕರಿಸಿತು.
ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಬಜೆಟ್ ನ್ನು ಅನುಮೋದನೆಗಾಗಿ ಸಚಿವ ಸಂಪುಟದ ಮುಂದೆ ಇರಿಸಿದರು.
8 ಸಾವಿರ ಬಜೆಟ್ ಪ್ರತಿಗಳನ್ನು ಕೇಂದ್ರ ಸರಕಾರ ಮುದ್ರಿಸಿದ್ದು, ಬಜೆಟ್ ನ 2,500 ಪ್ರತಿಗಳು ಸಂಸತ್ ಭವನ ತಲುಪಿದೆ. 11: 00 ಗಂಟೆಗೆ ಸಚಿವ ಅರುಣ್ ಜೇಟ್ಲಿ ಬಜೆಟ್ ಮಂಡಿಸುವರು. ಬಜೆಟ್ ಭಾಷಣ ಇದೇ ಮೊದಲ ಬಾರಿ ಹಿಂದಿ ಭಾಷೆಯಲ್ಲಿರಲಿದೆ.
Next Story