ರಾಜಸ್ಥಾನ ಉಪ ಚುನಾವಣೆ: ಆಲ್ವಾರ್, ಅಜ್ಮೀರ್ ನಲ್ಲಿ ಕಾಂಗ್ರೆಸ್ ಗೆ ಮುನ್ನಡೆ

ರಾಜಸ್ಥಾನ, ಫೆ.1: ರಾಜ್ಯದಲ್ಲಿ ಎರಡು ಲೋಕಸಭೆ ಹಾಗು ಒಂದು ವಿಧಾನಸಭೆಗೆ ನಡೆದ ಉಪ ಚುನಾವಣೆಯ ಮತ ಎಣಿಕೆ ಪ್ರಗತಿಯಲ್ಲಿದ್ದು, ಆಲ್ವಾರ್ ಹಾಗು ಅಜ್ಮೀರ್ ನಲ್ಲಿ ಕಾಂಗ್ರೆಸ್ ಭಾರೀ ಮುನ್ನಡೆಯಲ್ಲಿದೆ.
ಈ ಎರಡೂ ಕ್ಷೇತ್ರಗಳು ಬಿಜೆಪಿ ಕೈಯಲ್ಲಿದೆ. ಮಂಡಲ್ ಗರ್ ಕ್ಷೇತ್ರದಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ. ಜನವರಿ 29ರಂದು ರಾಜಸ್ಥಾನದ 2 ಲೋಕಸಭಾ ಹಾಗು ಒಂದು ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆದಿತ್ತು.
ಈ ಚುನಾವಣೆಯು ಆಡಳಿತಾರೂಢ ಬಿಜೆಪಿ ಸರಕಾರಕ್ಕೆ ಅತ್ಯಂತ ಮಹತ್ವದ್ದಾಗಿದೆ.
Next Story