ಕಮಲಾ ಸುರಯ್ಯಾರಿಗೆ ಗೂಗಲ್ ಡೂಡಲ್ ಗೌರವ
ತಿರುವನಂತಪುರಂ,ಫೆ.1: ಪ್ರಸಿದ್ಧ ಲೇಖಕಿ ದಿವಂಗತ ಕಮಲಾ ಸುರಯ್ಯಾರಿಗೆ ಗೂಗಲ್ ಡೂಡಲ್ ಗೌರವ ಅರ್ಪಿಸಿದೆ. ಭಾರತದ ಪ್ರಸಿದ್ಧ ಸಾಹಿತಿ, ಮಲಯಾಳಂನ ಜನಪ್ರಿಯ ಬರಹಗಾರ್ತಿ ಕಮಲಾ ಸುರಯ್ಯಾರನ್ನು ಗೌರವಿಸುವ ಡೂಡಲ್ನ್ನು ಕಲಾವಿದೆ ಮಂಜಿತ್ ಥಾಪ ರಚಿಸಿದ್ದಾರೆ. ಮಲಯಾಳಂ,ಇಂಗ್ಲಿಷ್ನಲ್ಲಿ ಸಣ್ಣಕಥೆ, ಕವಿತೆಗಳು, ಕಾದಂಬರಿಗಳನ್ನು ಸುರಯ್ಯಾ ಬರೆದಿದ್ದಾರೆ. ತನ್ನ ಅರುವತ್ತೆಂಟನೆ ವಯಸ್ಸಿನಲ್ಲಿ ಅವರು ಇಸ್ಲಾಮ್ ಸ್ವೀಕರಿಸಿದ್ದರು.
ಕಮಲಾ ಸುರಯ್ಯ 1999ರಲ್ಲಿ ಇಸ್ಲಾಮ್ ಧರ್ಮದ ಸ್ವೀಕರಿಸುವ ಮೊದಲು ಮಲಯಾಳಂ ಸಾಹಿತ್ಯದಲ್ಲಿ ‘ಮಾಧವಿ ಕುಟ್ಟಿ’ ಎನ್ನುವ ಹೆಸರಿನಲ್ಲಿ ಹಾಗೂ ಇಂಗ್ಲಿಷ್ನಲ್ಲಿ ‘ಕಮಲಾದಾಸ್’ ಎನ್ನುವ ಹೆಸರಿನಲ್ಲಿ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದರು. ಇಂಗ್ಲಿಷ್ ಪದ್ಯ ಬರೆದ ಭಾರತೀಯರಲ್ಲಿ ಕಮಲಾ ಪ್ರಮುಖರು. ನಮ್ಮ ದೇಶದ ಕಲೆಗೆ ಕಮಲಾ ಸುರಯ್ಯ ನೀಡಿದ ಕೊಡುಗೆಗಳನ್ನು ಪರಿಗಣಿಸಿ ಆಧುನಿಕ ಇಂಗ್ಲಿಷ್ ಕವಿತೆಗಳ ಮಾತೆ ಎನ್ನುವ ಹೆಸರನ್ನು ಅವರಿಗೆ ನೀಡಲಾಗಿತ್ತು.
1984ರಲ್ಲಿ ಸಾಹಿತ್ಯದ ನೋಬೆಲ್ಗೆ ಕಮಲಾ ಸುರಯ್ಯರನ್ನು ನಾಮನಿರ್ದೇಶನ ಮಾಡಲಾಗಿತ್ತು.