ಶುಲ್ಕ ಪಾವತಿಸದ್ದಕ್ಕೆ ಶಾಲೆಯಿಂದ ಹೊರಹಾಕಲ್ಪಟ್ಟ ವಿದ್ಯಾರ್ಥಿನಿ ಆತ್ಮಹತ್ಯೆ

ಹೈದರಾಬಾದ್, ಫೆ. 2: ಶಾಲೆಯ ಶುಲ್ಕ ಪಾವತಿಸದ ಹಿನ್ನೆಲೆಯಲ್ಲಿ ಶಾಲೆಯಿಂದ ಹೊರ ಹಾಕಲ್ಪಟ್ಟ 14 ವರ್ಷದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಪರೀಕ್ಷೆ ನಡೆಯುತ್ತಿದ್ದಾಗ ಶಾಲಾಧಿಕಾರಿಗಳು ತರಗತಿಗೆ ಬಂದು ವಿದ್ಯಾರ್ಥಿನಿಯನ್ನು ಕರೆದು ಶುಲ್ಕ ಭರಿಸದ್ದರಿಂದ ಪರೀಕ್ಷೆ ಬರೆಯಲು ಆಗುವುದಿಲ್ಲ ಎಂದು ತಿಳಿಸಿದ್ದಾರೆ. ತನ್ನನ್ನು ಇತರರ ಮುಂದೆ ಶಾಲಾಧಿಕಾರಿಗಳು ಅಪಮಾನಿಸಿದರೆಂದು ಮನೆಗೆ ಬಂದ ವಿದ್ಯಾರ್ಥಿನಿ ಸಹೋದರಿಯೊಂದಿಗೆ ಹೇಳಿದ್ದಾಳೆ. ಅದರ ನಂತರ ಬಾಲಕಿ ಫ್ಯಾನ್ಗೆ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಅವರು ನನಗೆ ಪರೀಕ್ಷೆ ಬರೆಯಲು ಬಿಡಲಿಲ್ಲ. ಅಮ್ಮ ನನ್ನನ್ನು ಕ್ಷಮಿಸು.." ಎಂದು ಪತ್ರ ಬರೆದಿಟ್ಟ ಬಳಿಕ ನೇಣು ಹಾಕಿಕೊಂಡಳು ಎನ್ನಲಾಗಿದೆ.
ಹೆತ್ತವರ ನೀಡಿದ ದೂರಿನ ಅನ್ವಯ ಶಾಲಾಧಿಕಾರಿಗಳ ವಿರುದ್ಧ ಅತ್ಮಹತ್ಯೆಗೆ ಪ್ರೇರಣೆ ನೀಡಿದ ಆರೋಪದಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
Next Story