2022ರ ವೇಳೆಗೆ ರೈತರ ಆದಾಯ ದ್ವಿಗುಣಗೊಳಿಸುವುದು ಅಸಾಧ್ಯ: ಮನಮೋಹನ್ ಸಿಂಗ್

ಹೊಸದಿಲ್ಲಿ, ಫೆ.2: ಕೃಷಿ ಅಭಿವೃದ್ಧಿ 12 ಶೇ.ದಷ್ಟಾಗದೆ 2022ರ ವೇಳೆಗೆ ರೈತರ ಆದಾಯ ದ್ವಿಗುಣಗೊಳಿಸಲು ಸಾಧ್ಯವಿಲ್ಲ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹೇಳಿದ್ದಾರೆ.
“2022ರ ವೇಳೆಗೆ ರೈತರ ಆದಾಯ ದ್ವಿಗುಣಗೊಳ್ಳಲಿದೆ ಎಂದು ಕೇಂದ್ರ ಸರಕಾರ ಹೇಳಿದೆ. ಆದರೆ ಕೃಷಿ ಅಭಿವೃದ್ಧಿ 12 ಶೇ.ದಷ್ಟಾಗದೆ ಅದು ಸಾಧ್ಯವಿಲ್ಲ. ನಾವದನ್ನು ಸಾಧಿಸುವವರೆಗೆ ಇದು ಟೊಳ್ಳು ಭರವಸೆಯಾಗಿರಲಿದೆ” ಎಂದು ವಿಪಕ್ಷಗಳನ್ನು ಭೇಟಿಯಾದ ನಂತರ ಸಿಂಗ್ ಹೇಳಿರುವುದಾಗಿ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಝಾದ್ ಹೇಳಿದ್ದಾರೆ.
“ಹಣಕಾಸಿನ ಕೊರತೆಯೂ ಹೆಚ್ಚಿದೆ. ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ನಾನು ಬಜೆಟ್ ನ ಬಗ್ಗೆ ಮಾತನಾಡುತ್ತಿಲ್ಲ. ಆದರೆ ಬಜೆಟ್ ನ ಹಣಕಾಸಿನ ವಿಷಯದ ತಪ್ಪುಗಳ ಬಗ್ಗೆ ನನಗೆ ಆತಂಕವಿದೆ” ಎಂದವರು ಹೇಳಿದರು.
Next Story