ಎ.5ರಿಂದ ಹೆಜಮಾಡಿ ಕೋಡಿ ಉರೂಸ್
ಪಡುಬಿದ್ರಿ,ಎ.3: ಬದ್ರಿಯಾ ಜುಮಾ ಮಸ್ಜಿದ್ ಹಾಗೂ ಸಯ್ಯಿದ್ ಅರಬಿ ವಲಿಯುಲ್ಲಾಹಿ (ಖ.ಸಿ) ದರ್ಗಾ ಶರೀಫ್, ಹೆಜಮಾಡಿ ಕೋಡಿಯಲ್ಲಿ 2 ವರ್ಷಕ್ಕೊಮ್ಮೆ ಆಚರಿಸಿಕೊಂಡು ಬರುತ್ತಿರುವ ಉರೂಸ್ ಎ.5ರಿಂದ 7ರವರೆಗೆ ನಡೆಯಲಿದೆ
ಎಪ್ರಿಲ್ 5ರಂದು ಸಂಜೆ ಹೆಜಮಾಡಿ ಕೋಡಿ ಜುಮಾ ಮಸೀದಿ ಖತೀಬ್ ಅಲ್ಹಾಜ್ ಅಬುಲ್ ಬುಶ್ರಾ ಕೆ. ಅಬೂಬಕ್ಕರ್ ಸಿದ್ದೀಕ್ ಮುಸ್ಲಿಯಾರ್ ಧ್ವಜಾರೋಹಣ ನೆರವೇರಿಸಲಿದ್ದಾರೆ. ಅದೇ ದಿನ ಬೃಹತ್ ಸ್ವಲಾತ್ ಮಜ್ಲಿಸ್ ನಡೆಯಲಿದೆ. ಅಸಯ್ಯದ್ ಖಾಝಿ ಫಝಲ್ ಕೋಯಮ್ಮ ತಂಙಳ್ ಕೂರ ನೇತೃತ್ವ ವಹಿಸಲಿದ್ದು, ಜುಮ್ಮಾ ಮಸೀದಿ ಅಧ್ಯಕ್ಷ ಹಾಗೂ ಉರೂಸ್ ಸಮಿತಿ ಅಧ್ಯಕ್ಷ ಎಂ.ಎಸ್ ಅಬ್ದುಲ್ ರಝಾಕ್ ಹಾಜಿ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಕನ್ನಂಗಾರ್ ಜುಮ್ಮಾ ಮಸೀದಿ ಮುದರ್ರಿಸ್ ಮುಹಮ್ಮದ್ ಅಶ್ರಫ್ ಸಖಾಫಿ ಕಿನ್ಯ ಮುಖ್ಯಪ್ರಭಾಷಣ ಮಾಡಲಿದ್ದಾರೆ. ಆ ಬಳಿಕ ರಾಜ್ಯ ಮಟ್ಟದ ದಫ್ ಸ್ಪರ್ಧೆ ನಡೆಯಲಿದೆ.
6ರಂದು ಧಾರ್ಮಿಕ ಮತಪ್ರವಚನ ಹಾಗೂ ದುವಾ ಮಜ್ಲಿಸ್ ನಡೆಯಲಿದೆ. ದುವಾ ನೇತೃತ್ವವನ್ನು ಅಸಯ್ಯದ್ ಅಬ್ದುಲ್ರಹ್ಮಾನ್ ಇಂಬಿಚ್ಚಿಕೋಯ ತಂಙಳ್ ಅಲ್ಬುಖಾರಿ ಬಾಯಾರ್ ವಹಿಸಲಿದ್ದಾರೆ. ಕೆ.ಎ.ಮುಹಮ್ಮದ್ ಬಶೀರ್ ಮದನಿ ಅಲ್ಕಾಮಿಲ್ ಕೂಳೂರು ಮುಖ್ಯಪ್ರಭಾಷಣ ಮಾಡಲಿದ್ದಾರೆ. 7ರಂದು ಸಮಾರೋಪ ಸಮಾರಂಭ ಹಾಗೂ ಬುರ್ದಾ ಮಜ್ಲಿಸ್ ನಡೆಯಲಿದೆ. ಎಸ್ಸೆಸ್ಸೆಫ್ ಜಿಲ್ಲಾಧ್ಯಕ್ಷ ಅಶ್ರಫ್ ರಝಾ ಅಂಜದಿ ಪಕ್ಷಿಕೆರೆ ಮುಖ್ಯಪ್ರಭಾಷಣ ಮಾಡಲಿದ್ದು, ಸಯ್ಯದ್ ಸುಹೈಲ್ ಅಸ್ಸಖಾಫ್ ತಂಙಳ್ ದುವಾ ನೇತೃತ್ವ ವಹಿಸಲಿದ್ದಾರೆ. ಬಳಿಕ ಅಬ್ದುಲ್ಸ್ಸಮದ್ ಅಮಾನಿ ಪಟ್ಟುವಂ ಬುರ್ದಾ ನಡೆಯಲಿದ್ದು, ಮಶೂಫ್ ಶಿರ್ವ ಅವರಿಂದ ನಅತೇ ಶರೀಫ್ ನಡೆಯಲಿದೆ.