ಅಪರೂಪದ ಸಮುದ್ರ ಹಕ್ಕಿಯ ರಕ್ಷಣೆ

ಉಡುಪಿ, ಮೇ7: ಹಾರಲು ಆಗದೆ ಅಸಹಾಯಕ ಪರಿಸ್ಥಿತಿಯಲ್ಲಿ ಬೈಲೂರು ಮಿಷನ್ ಕಂಪೌಂಡಿನ ರಸ್ತೆಬದಿಯಲ್ಲಿ ಸೋಮವಾರ ಕಂಡುಬಂದ ಬಲು ಅಪ ರೂಪದ ಸಮುದ್ರ ಹಕ್ಕಿಯನ್ನು ಸಾಮಾಜಿಕ ಕಾರ್ಯಕರ್ತರು ರಕ್ಷಿಸಿ ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ.
ರಸ್ತೆ ಬದಿಯಲ್ಲಿದ್ದ ಗ್ರೇಟ್ ಬ್ಲಾಕ್ ಬ್ಯಾಕೆಡ್ ಗುಲ್ ಎಂಬ ಹೆಸರಿನ ಈ ಹಕ್ಕಿಯನ್ನು ಸ್ಥಳೀಯರಾದ ಅಶ್ವಿನಿ ಮತ್ತು ಶೃದ್ಧಾ ಎಂಬವರು ಬೀದಿ ನಾಯಿ ಗಳಿಂದ ರಕ್ಷಿಸಿ, ತಮ್ಮ ಮನೆಯಲ್ಲಿ ಆಶ್ರಯ ಕಲ್ಪಿಸಿದ್ದರು. ಬಳಿಕ ಈ ಕುರಿತು ಸಾಮಾಜಿಕ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಅವರಿಗೆ ಮಾಹಿತಿ ನೀಡಿದ್ದರು. ಅದರಂತೆ ಇವರು ಆ ಹಕ್ಕಿಯನ್ನು ತಂದು ಆದಿವುಡುಪಿಯಲ್ಲಿುವ ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ.
Next Story