ಕುದ್ರೋಳಿ ಸಲಫಿ ಮಸೀದಿಯಲ್ಲಿ ಈದುಲ್ ಫಿತ್ರ್ ಸಂಭ್ರಮಾಚರಣೆ

ಮಂಗಳೂರು, ಜೂ. 16: ಈದುಲ್ ಫಿತ್ರ್ ಅಂಗವಾಗಿ ಕುದ್ರೋಳಿಯ ಸಲಫಿ ಮಾಸೀದಿಯಲ್ಲಿ ಶುಕ್ರವಾರ ಈದ್ ನಮಾಝ್ ನೆರವೇರಿತು.
ಮೌಲವಿ ಶಿಹಾಬ್ ಸಲಫಿ ಅವರು ಈದ್ ನಮಾಝ್ ಮತ್ತು ಖುತುಬಾ ನೇತೃತ್ವ ವಹಿಸಿದ್ದು, ನಂತರ ಈದುಲ್ ಫಿತ್ರ್ ಸಂದೇಶ ನೀಡಿದರು.
ಈ ಸಂದರ್ಭ ಎಸ್ ಕೆ ಎಸ್ ಎಂ ಕುದ್ರೋಳಿ ಯುನಿಟ್ ಅಧ್ಯಕ್ಷ ನಾಸಿರುದ್ದೀನ್ ಹೈಕೊ, ಕಾರ್ಯದರ್ಶಿ ಅಶ್ರಫ್ ಕುದ್ರೋಳಿ, ಖಜಾಂಚಿ ಅಬ್ದುಲ್ ಲತೀಫ್ ಹಾಗು ಇತರರು ಉಪಸ್ಥಿತರಿದ್ದರು.
Next Story