ವಿದ್ಯಾರ್ಥಿಯ ಶರ್ಟ್ ಗುಂಡಿ ಹಾಕಿ ಸರಳತೆ ಮೆರೆದ ಸಚಿವ ಎನ್.ಮಹೇಶ್
ಹುಬ್ಬಳ್ಳಿ, ಜೂ.26: ವಿದ್ಯಾರ್ಥಿಯೋರ್ವನನ್ನು ಹತ್ತಿರ ಕರೆದ ಶಿಕ್ಷಣ ಸಚಿವ ಎನ್.ಮಹೇಶ್, ಆತನ ಅಂಗಿಯ ಗುಂಡಿಯನ್ನು ಹಾಕುವ ಮೂಲಕ ವಿದ್ಯಾರ್ಥಿ ಪ್ರೀತಿ ಮೆರೆದಿದ್ದು, ಶಿಕ್ಷಕರಿಂದ ಮೆಚ್ಚುಗೆಗೆ ಪಾತ್ರರಾದರು.
ಮಂಗಳವಾರ ಹುಬ್ಬಳ್ಳಿ ನಗರದ ವಿವಿಧ ಶಾಲೆಗಳಿಗೆ ದಿಢೀರ್ ಭೇಟಿ ನೀಡಿದ ಅವರು, ಗೋಕುಲ್ ರಸ್ತೆಯ ಮಯೂರ ಗಾಡ್ನಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಶಾಲೆಯ ವಿದ್ಯಾರ್ಥಿಯೊಬ್ಬ ಸಚಿವರನ್ನು ಕುತೂಹಲದಿಂದ ನೋಡುತ್ತಿದ್ದ. ಇದನ್ನು ಗಮನಿಸಿದ ಸಚಿವರು, ಆತನನ್ನು ಹತ್ತಿರ ಕರೆದು, ಬಿಚ್ಚಿದ್ದ ಅಂಗಿಯ ಗುಂಡಿಯನ್ನು ಹಾಕಿದರು.
ಈ ವೇಳೆ ವಿದ್ಯಾರ್ಥಿಗೆ ಹಿತವಚನ ಹೇಳಿದ ಅವರು, ನೀಟಾಗಿ ಅಂಗಿಯ ಗುಂಡಿ ಹಾಕಿಕೊಂಡು ಶಿಸ್ತಿನಿಂದ ಇರಬೇಕು. ಹಾಗೂ ಚೆನ್ನಾಗಿ ಓದಬೇಕೆಂದು ತಿಳಿ ಹೇಳಿದರು. ಸಚಿವರ ಸರಳತೆಗೆ ಅಲ್ಲಿಯೆ ಇದ್ದ ಅಧಿಕಾರಿಗಳು ಹಾಗೂ ಶಿಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದರು.
Next Story