ತುಮಕೂರು: ಆಕಸ್ಮಿಕ ಬೆಂಕಿಗೆ ಗುಡಿಸಲು, ಮಿನಿ ಟ್ರಾಕ್ಟರ್ ಭಸ್ಮ
ತುಮಕೂರು, ಜು. 31: ವಿದ್ಯುತ್ ಪರಿವರ್ತಕದಿಂದ ಆಕಸ್ಮಿಕ ಬೆಂಕಿ ಹೊತ್ತಿಕೊಂಡ ಪರಿಣಾಮ ಗುಡಿಸಲು ಮತ್ತು ಮಿನಿ ಟ್ರಾಕ್ಟರ್ ಸಂಪೂರ್ಣ ಭಸ್ಮವಾದ ಘಟನೆ ಗುಬ್ಬಿ ತಾಲೂಕಿನ ನಡುವಲಪಾಳ್ಯದಲ್ಲಿ ಇಂದು ಬೆಳಗ್ಗೆ ನಡೆದಿದೆ.
ಗುಡಿಸಲಿನ ಸಮೀಪ ಇದ್ದ ಟ್ರಾನ್ಸ್ಫಾರ್ಮರ್ನಿಂದ ಬೆಂಕಿಯ ಕಿಡಿ ಹೊರ ಬಿದ್ದ ಪರಿಣಾಮ ಗುಡಿಸಲು ಧಗಧಗನೆ ಹೊತ್ತಿ ಉರಿದಿದೆ. ಬೆಂಕಿಯ ಜ್ವಾಲೆ ಹೆಚ್ಚಾದ ಕಾರಣ ಹತ್ತಿರದಲ್ಲೇ ಇದ್ದ ಟ್ರಾಕ್ಟರ್ ಕೂಡ ಬೆಂಕಿಗೆ ಆಹುತಿಯಾಗಿದೆ. ಗುಡಿಸಲಲ್ಲಿ ಯಾರು ಇಲ್ಲದಿದ್ದ ಕಾರಣ ದೊಡ್ದ ಅನಾಹುತ ತಪ್ಪಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದರು. ಗುಬ್ಬಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story