ಗೌರಿ ಲಂಕೇಶ್ ಹತ್ಯೆ ಪ್ರಕರಣ: ರೆಸಾರ್ಟ್ ಮಾಲಕನ ವಿಚಾರಣೆ ?
ಬೆಂಗಳೂರು, ಆ.8: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಂಬಂಧ ಸಿಟ್(ಎಸ್ಐಟಿ) ತನಿಖಾಧಿಕಾರಿಗಳು, ಬೆಳಗಾವಿಯ ರೆಸಾರ್ಟ್ ಮಾಲಕನೊಬ್ಬನನ್ನು ವಿಚಾರಣೆಗೊಳಪಡಿಸಿದರು ಎಂದು ಮೂಲಗಳು ತಿಳಿಸಿವೆ.
ಬುಧವಾರ ರೆಸಾರ್ಟ್ ಮಾಲಕನನ್ನು ವಶಕ್ಕೆ ಪಡೆದಿರುವ ಸಿಟ್ ಅಧಿಕಾರಿಗಳು, ಬೆಳಗಾವಿಯ ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸಿರುವುದಾಗಿ ತಿಳಿದುಬಂದಿದೆ.
ಪ್ರಕರಣದ ಪ್ರಮುಖ ಆರೋಪಿ ಎನ್ನಲಾದ ಪರಶುರಾಮ ವಾಗ್ಮೋರೆ ಬಂದೂಕು ತರಬೇತಿ ಪಡೆಯುತ್ತಿದ್ದ ವೇಳೆ ಬೆಳಗಾವಿಯಲ್ಲಿ ತಂಗಲು ರೆಸಾರ್ಟ್ ಮಾಲಕ ಆಶ್ರಯ ನೀಡಿದ್ದ. ಹೀಗಾಗಿ, ಈತನನ್ನು ಸಿಟ್ ತನಿಖಾಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸಿದರು ಎಂದು ಹೇಳಲಾಗುತ್ತಿದೆ.
ಆರೋಪಿ ಪರುಶುರಾಮ ವಾಗ್ಮೋರೆ ಬೆಳಗಾವಿಯ ಹೊರವಲಯದಲ್ಲಿ ಬಂದೂಕು ತರಬೇತಿ ಪಡೆದಿದ್ದನು ಎಂದು ತನಿಖೆ ವೇಳೆ ಬಹಿರಂಗವಾಗಿತ್ತು. ಕಳೆದ ತಿಂಗಳು ವಾಗ್ಮೋರೆಯನ್ನು ಸಿಟ್ ತನಿಖಾಧಿಕಾರಿಗಳು ಬೆಳಗಾವಿಗೆ ಕೆಲ ಪ್ರದೇಶಗಳಿಗೆ ಕರೆ ತಂದು ಸ್ಥಳ ಪರಿಶೀಲನೆ ನಡೆಸಿದ್ದರು.
Next Story