ಹನೂರು: ಅರಣ್ಯದೊಳಗೆ ಶೇಖರಿಸಿಟ್ಟಿದ್ದ ಕಡವೆ ಮಾಂಸ ವಶ
ಹನೂರು,ಆ.09: ಒಣಗಿಸಿ ಅರಣ್ಯದೊಳಗೆ ಶೇಖರಣೆ ಮಾಡಿದ್ದ ಕಡವೆ ಮಾಂಸವನ್ನು ಅರಣ್ಯಾಧಿಕಾರಿಗಳು ವಶ ಪಡಿಸಿದ್ದು, ಆರೋಪಿಗಳ ಪತ್ತೆಗಾಗಿ ಶೋಧ ನಡೆಸಿದ್ದಾರೆ.
ಹನೂರು ತಾಲೂಕಿನ ಕೌದಳ್ಳಿ ವನ್ಯಜೀವಿ ವಲಯ ಅರಣ್ಯ ಪ್ರದೇಶದಲ್ಲಿ ವಲಯ ಅರಣ್ಯ ಇಲಾಖಾಧಿಕಾರಿಗಳು, ಕಡವೆ ಮಾಂಸ ಶೇಖರಣೆ ಮಾಡಿರುವುನ್ನು ಪತ್ತೆ ಹಚ್ಚಿದ್ದು, 30 ಕೆಜಿ ಮಾಂಸ ಮತ್ತು ನದಿ ದಾಟಲು ಬಳಸುತ್ತಿದ್ದ ತೆಪ್ಪವನ್ನು ವಶಕ್ಕೆ ಪಡೆದು ಆರೋಪಿಗಳ ಪತ್ತೆಗಾಗಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಈ ಸಂದರ್ಭ ಐಎಪ್.ಎಸ್ ಅಧಿಕಾರಿ ಸಂತೋಷ್ ಕುಮಾರ್, ವಲಯ ಅರಣ್ಯಾಧಿಕಾರಿ ಶಂಕರ್ .ಡಿ ಅಂತರಗಟ್ಟಿ ಉಪವಲಯಅರಣ್ಯಾಧಿಕಾರಿ ರಾಜೇಶ್ ಅರಣ್ಯ ರಕ್ಷಕರಾದ ಮೋಹನ್, ನಾಗಪ್ಪ ಇದ್ದರು.
Next Story